
ಬೀದರ್: ಮೇ.೨:ಕಲ್ಯಾಣ ಕರ್ನಾಟಕ ವಿದ್ಯುತ್ ತಂತಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘವು ನಗರದಲ್ಲಿ ಮಹಾತ್ಮರ ಮೂರ್ತಿಗಳಿಗೆ ಗೌರವಿಸುವ ಮೂಲಕ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಿತು.
ಸಂಘದ ಪದಾಧಿಕಾರಿಗಳು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇರುವ ಡಾ. ಅಂಬೇಡ್ಕರ್ ಅವರ ಮೂರ್ತಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದರು.
ಬಳಿಕ ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಶಿವಾಜಿ ಮಹಾರಾಜ್ ವೃತ್ತ, ಹರಳಯ್ಯ ವೃತ್ತ, ಮಡಿವಾಳ ಮಾಚಿದೇವ ವೃತ್ತದಲ್ಲಿನ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ಸಂಘದ ಅಧ್ಯಕ್ಷ ಧೂಳಪ್ಪ ಬಳತೆ, ಪ್ರಧಾನ ಕಾರ್ಯದರ್ಶಿ ಸುನೀಲ್ ಬಂದಗೆ, ಪ್ರಮುಖರಾದ ಪಂಢರಿನಾಥ, ಸಂತೋಷ್ ರಾಗಾ, ಸಿದ್ದು ಮಡಿವಾಳ, ರಾಜೇಂದ್ರ, ರಾಜಕುಮಾರ ಬಿರಾದಾರ, ಸತೀಶ್ ಕಾಂಬಳೆ, ಚಂದ್ರಕಾAತ ಕೋಡಗೆ, ಹಣಮಂತ ಕೊಳಾರ(ಕೆ), ಎಂ.ಡಿ. ಅಬ್ದುಲ್ಲಾ ಖಾನ್, ಸುನೀಲ್ ಹುಲಸೂರೆ, ಎಂ.ಡಿ. ಮುಜಾಹೀದ್ ಖಾನ್, ಸುರೇಶ್ ಬಿ. ಕನ್ನಾಳೆ ಮತ್ತಿತರರು ಇದ್ದರು.
























