Home ಜಿಲ್ಲೆ ಬೆಂಗಳೂರು ಕೆಪಿಎಸ್‌ಸಿ.ಕರ್ಮಕಾಂಡ: ಸಿಬಿಐ ತನಿಖೆಗೆ ಜೆಡಿಎಸ್ ಆಗ್ರಹ

ಕೆಪಿಎಸ್‌ಸಿ.ಕರ್ಮಕಾಂಡ: ಸಿಬಿಐ ತನಿಖೆಗೆ ಜೆಡಿಎಸ್ ಆಗ್ರಹ

ಕೋಲಾರ,ಸೆ,೫- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪಶುವೈದ್ಯಾಧಿಕಾರಿಗಳ ಇಲಾಖೆಯಲ್ಲಿ ೪೦೦ ಮಂದಿ ನೇಮಕಾತಿ ಪರೀಕೆಯಲ್ಲಿ ಹುದ್ದೆಗಳನ್ನು ಮಾರಾಟ ಮಾಡಿರುವ ಕೆ.ಪಿ.ಎಸ್.ಸಿ. ಕರ್ಮಕಾಂಡದಲ್ಲಿ ರಾಜ್ಯದ ಆಡಳಿತ ರೂಢ ಕಾಂಗ್ರೇಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣಗಳು ಬಟಾಬಯಲಾಗಿದೆ. ಇದರಿಂದಾಗಿ ಪರೀಕ್ಷೆ ಬರೆದ ಪ್ರತಿಭಾವಂತರಿಗೆ ವಂಚನೆಯಾಗಿದ್ದು ಮರು ಪರೀಕ್ಷೆ ನಡೆಸ ಬೇಕು. ಭ್ರಷ್ಟಚಾರದ ತನಿಖೆಯನ್ನು ಸಿ.ಬಿ.ಐ ತನಿಖೆಗೆ ವಹಿಸ ಬೇಕೆಂದು ಸಮಾಜ ಸೇವಕ ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಆಗ್ರಹಿಸಿದರು.


ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ವೃತ್ತದ ಬಳಿ ಸಂಘಟಿತರಾದ ಜೆ.ಡಿ.ಎಸ್. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನೊರಾರು ಸಂಖ್ಯೆಯಲ್ಲಿ ಮಾನವ ಸರಪಳಿ ರಚಿಸಿ ಕೊಂಡು ರಸ್ತೆ ತಡೆ ಮೂಲಕ ನಡೆಸಿದ ಪ್ರತಿಭಟನೆಯ ನೇತ್ರತ್ವವನ್ನು ವಹಿಸಿ ಅವರು ಮಾತನಾಡಿದರು.


ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವು ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ಹರಾಜಿಗಿಟ್ಟಿದೆ. ಪ್ರತಿ ಹುದ್ದೆಗೆ ದರಗಳನ್ನು ನಿಗಧಿಪಡೆಸಿ ಕೊಂಡಿದ್ದು ಕೆ.ಪಿ.ಎಸ್.ಸಿ. ಕಚೇರಿಯನ್ನು ಬ್ರೋಕರ್ ಕಚೇರಿಯಂತೆ ಪರಿವರ್ತಿಸಿ ಕೊಳ್ಳಲಾಗಿದೆ. ಅಧ್ಯಕ್ಷರಾದ ಸಾವುಕಾರ್ ಶಿವಶಂಕರಪ್ಪ ಅವರ ಮಗಳಿಗೆ ಹುದ್ದೆ ನೀಡಲು ರೆರ್ಸಾಟ್ಸ್‌ನಲ್ಲಿ ಪರೀಕ್ಷೆ ಬರೆಸಲಾಗಿದೆ. ೪೦ ಲಕ್ಷ ರೂಗಳಿಂದ ೧,೫ ಕೋಟಿ ರೂಗಳವರೆಗೆ ಹುದ್ದೆಗಳಿಗೆ ದರಗಳನ್ನು ನಿಗಧಿ ಪಡೆಸಿದ್ದಾರೆ ಎಂದು ದೂರಿದರು.


ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಕಾಂಗ್ರೇಸ್ ಸರ್ಕಾರ ಚೆಲ್ಲಾಡವಾಡಲು ಮುಂದಾಗಿರುವುದು ಖಂಡನೀಯ. ಕಳೆದ ೨೦೨೩ರಿಂದ ನಡೆಸಿದ ಪರೀಕ್ಷೆಗಳಲ್ಲಿ ಮಾಡಿರುವ ಹಗರಣಗಳ ಸಂಪೂರ್ಣ ತನಿಖೆಯನ್ನು ಸಿ.ಓ.ಡಿ.ಗೆ ಬೇಡಾ ಸಿ.ಬಿ.ಐ.ಗೆ ವಹಿಸ ಬೇಕು. ಈಗಾಗಲೇ ಸಿ.ಓ.ಡಿ.ತನಿಖೆಯಲ್ಲಿ ೬ ಮಂದಿ ಪರೀಕ್ಷಾರ್ಥಿಗಳು ತಾವು ಹಣ ನೀಡಿ ರೆಸಾರ್ಟ್‌ನಲ್ಲಿ ಪರೀಕ್ಷೆಯನ್ನು ಬರೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಅಕ್ರಮ ಜಾಲದ ಮಧ್ಯವರ್ತಿ ಬಸವರಾಜ್ ಕನ್ನಾಳೆ ಎಂಬಾತನನ್ನು ಸಿ.ಐ.ಡಿ. ಪೊಲೀಸರು ಬಂಧಿಸಿದ್ದಾರೆ ಎಂದರು.


ಈತನ ಜೂತೆಗೆ ಸಂಪರ್ಕ ಇರುವಂತ ಐ.,ಎ.ಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸಂರ್ಪಕವಿತ್ತು ಎನ್ನಲಾಗಿದ್ದು ಈ ಬಗ್ಗೆಯು ತನಿಖೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧ ಪಟ್ಟ ಭ್ರಷ್ಟಾಚಾರಕ್ಕೆ ಬೆಂಬಲಿತ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದ ಅವರು ಯು.ಪಿ.ಎಸ್.ಸಿ. ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸ ಬೇಕೆಂದು ಒತ್ತಾಯಿಸಿದರು


ರಾಜ್ಯದಲ್ಲಿ ೨ ಲಕ್ಷ ೮೦ ಸಾವಿರ ಹುದ್ದೆಗಳು ಖಾಲಿ ಇದ್ದರೂ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ವಿದ್ಯಾವಂತ ಯುವಕರಿಗೆ ಉದ್ಯೋಗದ ನೀಡಲು ಸರ್ಕಾರವು ವಿಳಂಭ ಧೋರಣೆ ತಾಲಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುತ್ತಿದೆ. ಪ್ರಮಾಣಿಕ ಬಡ ವಿದ್ಯಾರ್ಥಿಗಳಿಗೆ ವಂಚನೆಯಾಗಿದೆ ನೊಂದವರ ಪರವಾಗಿ ಈ ಪ್ರತಿಭಟನೆಯಾಗಿದೆ. ಕೊಡಲೇ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದಾದ್ಯಂತ ಹೋರಾಟವನ್ನು ಹಮ್ಮಿ ಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಜೆಡಿ.ಎಸ್.ಜಿಲ್ಲಾ ಕಾರ್ಯದ್ಯಕ್ಷ ಬಣಕನಹಳ್ಳೀ ನಟರಾಜ್, ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ನಗರಸಭೆ ಮಾಜಿ ಸದಸ್ಯ ವಿ.ರಾಜೇಶ್, ಚಂದ್ರಪ್ಪ ವಿದ್ಯಾರ್ಥಿ ಸಹನಾ ಸೇರಿದಂತೆ ಅನೇಕರು ಮಾತನಾಡಿದರು.


ಮಾನವ ಸರಪಳಿ ರಚಿಸಿ ಸುಮಾರು ೩೦ ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಕೆ.ಪಿ.ಎಸ್.ಸಿ. ಹಗರಣ ಸೇರಿದಂತೆ ವಿವಿಧ ಹಗರಣಗಳ ವಿರುದ್ದ ಘೋಷಣೆಗಳು ಕೊಗಿದರು. ಭಿತ್ತಿ ಫಲಕಗಳ ಪ್ರದರ್ಶನ ನಡೆಸಿದರು.