
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ. 5 :- ಪಟ್ಟಣದ ಶ್ರೀ ವಿಶ್ವಚೇತನ ವಿದ್ಯಾಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹತ್ತಾರು ಮಕ್ಕಳಿಗೆ ಕೃಷ್ಣ -ರುಕ್ಮಿಣಿ, ರಾಧೆಯರ ವೇಷ ಧರಿಸಿ ಕಟ್ಟಿದ ಮಡಿಕೆಯೋಡೆದು ಬೆಣ್ಣೆ ತಿನ್ನುವ ಸನ್ನಿವೇಶ ಸೃಷ್ಟಿಸಿದ್ದು ಇದರಲ್ಲಿ ಭಾಗವಹಿಸಿದ ಮಕ್ಕಳು, ಶಿಕ್ಷಕರು ಸಂಭ್ರಮಿಸಿದರು ಮಕ್ಕಳ ಪಾಲಕರು ಶಾಲವರಣದಲ್ಲಿ ಇಂತಹ ಪಠ್ಯತರ ಚಟುವಟಿಕೆ ಕಂಡು ಸಂತಸ ವ್ಯಕ್ತಪಡಿಸಿದರು.
ಶಾಲಾಡಳಿತಾಧಿಕಾರಿ ಕರಿಬಸಮ್ಮ ಮಾತನಾಡಿ ಮಕ್ಕಳು ದೇಶದ ಭವಿಷ್ಯವಾಗಿದ್ದು ಅವರ ಕಲಿಕೆಯ ಬೆಳವಣಿಗೆ ಉತ್ತಮ ಪರಿಸರದಲ್ಲಿದ್ದರೆ ಉನ್ನತ ಶಿಕ್ಷಣ ಪಡೆದುಕೊಂಡು ದೇಶದ ಸತ್ಪ್ರೇಜೇಯಾಗಬಲ್ಲರು ಇದಕ್ಕೆ ಪಾಲಕ ಪೋಷಕರ ಸಹಕಾರ ಅತ್ಯಗತ್ಯವಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಚಟುವಟಿಕೆ ಜೊತೆಗೆ ಪಠ್ಯತರ ಚಟುವಟಿಕೆ ಸಹ ಅಗತ್ಯವಾಗಿದ್ದು ಅದನ್ನು ಶಿಕ್ಷಕರು ಮಕ್ಕಳ ಪ್ರತಿಭೆ ಅರಿತು ಅದಕ್ಕೆ ಪ್ರೋತ್ಸಾಹಿಸಿದರೆ ಉತ್ತಮವಾಗಲಿದೆ ಎಂದ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ಕೃಷ್ಣ ರುಕ್ಮಿಣಿ ರಾಧೆಯರ ವೇಷಭೂಷಣ ಧರಿಸಿದ್ದು ಅಲ್ಲದೆ ಕೃಷ್ಣ ಬೆಣ್ಣೆ ಇರುವ ಮಡಿಕೆಯನ್ನು ಒಡೆಯುವ ಸನ್ನಿವೇಶದ ಪ್ರಸಂಗ ಭಾಗವಹಿಸಿದ ಪಠ್ಯತರ ಚಟುವಟಿಕೆ ಪ್ರಸಂಗ ಮಕ್ಕಳನ್ನು ರಂಜಿಸಿತು ಎಂದು ಹೇಳಬಹುದು ಮಕ್ಕಳ ಸಂತಸ ಕಂಡ ಪಾಲಕರು ಸಹ ಸಂಭ್ರಮಿಸಿ ಮಕ್ಕಳಲ್ಲಿ ಮಕ್ಕಳಾದ ಪ್ರಸಂಗ ಕಂಡುಬಂದಿತು.
ಈ ಸಂದರ್ಭದಲ್ಲಿ ಶ್ರೀ ವಿಶ್ವಚೇತನ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕ ವರ್ಗದವರು ಹಾಜರಿದ್ದರು.






























