Home ಜಿಲ್ಲೆ ಕಲಬುರಗಿ ಹಲವು ವರ್ಷಗಳ ನಂತರ ಡಾಂಬರೀಕರಣ ಕಂಡ ಕೊಟ್ಟರಗಾ-ಶ್ರೀಚಂದ್ರ ರಸ್ತೆ

ಹಲವು ವರ್ಷಗಳ ನಂತರ ಡಾಂಬರೀಕರಣ ಕಂಡ ಕೊಟ್ಟರಗಾ-ಶ್ರೀಚಂದ್ರ ರಸ್ತೆ

ಕಲಬುರಗಿ,ಜೂ.18-ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಮಲಾಪುರ ತಾಲೂಕಿನ ಕೊಟ್ಟರಗಾ ಗ್ರಾಮದಿಂದ ಶ್ರೀಚಂದ ಗ್ರಾಮಕ್ಕೆ ಹೋಗುವ ರಸ್ತೆ ಡಾಂಬರೀಕರಣವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಕೊಟ್ಟರಗಾದಿಂದ ಶ್ರೀಚಂದ ಗ್ರಾಮಕ್ಕೆ ಹೋಗುವ ರಸ್ತೆ ಡಾಂಬರೀಕರಣವಾಗಿರಲಿಲ್ಲ. ರಸ್ತೆ ಹದಗೆಟ್ಟು ಹೋಗಿದ್ದರಿಂದ ಈ ರಸ್ತೆಯಲ್ಲಿ ಜನರು ಮತ್ತು ವಾಹನ ಸವಾರರು ಓಡಾಡುವುದೇ ಕಷ್ಟವಾಗಿತ್ತು. ಈ ಸಂಬಂಧ ಉಭಯ ಗ್ರಾಮಸ್ಥರು ಶಾಸಕರಾದ ಬಸವರಾಜ ಮತ್ತಿಮೂಡ ಅವರಿಗೆ ಕೊಟ್ಟರಗಾದಿಂದ ಶ್ರೀಚಂದ ಗ್ರಾಮಕ್ಕೆ ಹೋಗುವ ರಸ್ತೆ ಡಾಂಬರೀಕರಣ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಇದೀಗ ರಸ್ತೆ ಡಾಂಬರೀಕರಣ ಮಾಡಿಸಿದ್ದು, ಇದರಿಂದ ಜನರಿಗೆ ಓಡಾಡಲು ಅನುಕೂಲವಾದಂತಾಗಿದೆ. ಇದಕ್ಕಾಗಿ ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಯುವ ಮುಖಂಡ ಶಾಂತಲಿಂಗ ಸೂಗೂರ ಕೊಟ್ಟರಗಾ ಅವರು ಉಭಯ ಗ್ರಾಮಗಳ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.