
ವಡಗೇರ: ತಾಲೂಕಿನ ಬಬಲಾದ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶ್ರೀಕೃಷ್ಣ ಜಯಂತಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಶ್ರೀಕೃಷ್ಣ ಜಯಂತಿ ಅಂಗವಾಗಿ ಅಂಗನವಾಡಿಯ ಪುಟಾಣಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ವಿಶೇಷವಾಗಿ ಚಾರ್ವಿಕಿ ರಾಧೆಯ ಪಾತ್ರದಲ್ಲಿ ಮುದ್ದಾಗಿ ಕಾಣಿಸಿಕೊಂಡರೆ, ಸಾಬಣ್ಣ ಬಬಲಾದ್ ಅವರು ಶ್ರೀಕೃಷ್ಣನ ಪಾತ್ರದಲ್ಲಿ ಮಿಂಚಿದರು.
ಅAಗನವಾಡಿ ಕಾರ್ಯಕರ್ತರು ಹಾಗೂ ಪುಟಾಣಿ ಮಕ್ಕಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಶ್ರೀಕೃಷ್ಣ ಜಯಂತಿಯ ಸಂಭ್ರಮವನ್ನು ಹೆಚ್ಚಿಸಿದರು. ಕೃಷ್ಣ-ರಾಧೆಯ ವೇಷದಲ್ಲಿದ್ದ ಮಕ್ಕಳ ಮುಗ್ಧ ನಗು ಹಾಗೂ ಆಕರ್ಷಕ ವೇಷಭೂಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣನ ಜೀವನ, ಆದರ್ಶಗಳು ಹಾಗೂ ಜನ್ಮಾಷ್ಟಮಿಯ ಮಹತ್ವವನ್ನು ಪರಿಚಯಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.





























