Home ಜಿಲ್ಲೆ ವಿಜೃಂಭಣೆಯಿAದ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ: ಜೋಡುಪಲ್ಲಕ್ಕಿ ಉತ್ಸವಕ್ಕೆ ಭಕ್ತರ ಮಹಾ ಸಾಗರ

ವಿಜೃಂಭಣೆಯಿAದ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ: ಜೋಡುಪಲ್ಲಕ್ಕಿ ಉತ್ಸವಕ್ಕೆ ಭಕ್ತರ ಮಹಾ ಸಾಗರ

ಯಾದಗಿರಿ:ಮೇ.೩:ತಾಲೂಕಿನ ಕಂಚಗಾರಹಳ್ಳಿಯಲ್ಲಿ ನಡೆದ ಶ್ರೀ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವವು ಅಪಾರ ಭಕ್ತಿಭಾವ ಮತ್ತು ಸಂಭ್ರಮದ ಮಧ್ಯೆ ಶುಕ್ರವಾರ ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಜಾತ್ರೆಯ ಪ್ರಮುಖ ಆಕರ್ಷಣೆಯಾದ ನೂತನ ಜೋಡುಪಲ್ಲಕ್ಕಿ ಉತ್ಸವ ಭಕ್ತರ ಕಣ್ಣಿಗೆ ಹಬ್ಬವಾಗಿದ್ದು, ಊರಿನ ವಾತಾವರಣವೇ ಧಾರ್ಮಿಕ ಭಾವನೆಯಲ್ಲಿ ಮುಳುಗಿದಂತಾಯಿತು.

ಪ್ರತಿ ವರ್ಷದ ಸಂಪ್ರದಾಯದAತೆ, ಯರಗೋಳದಿಂದ ಕಾಳಮ್ಮ ದೇವಿ ಹಾಗೂ ಮೌನೇಶ್ವರರ ಜೋಡುಪಲ್ಲಕ್ಕಿ ಮೆರವಣಿಗೆ ಭರ್ಜರಿಯಾಗಿ ಆರಂಭವಾಗಿ, ವಾದ್ಯಘೋಷಗಳು, ಭಕ್ತರ ಜಯಘೋಷಗಳ ನಡುವೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಳಿಕ ಮೆರವಣಿಗೆ ಬಾವಿಯ ಸಮೀಪದ ಗಂಗಾಸ್ಥಳಕ್ಕೆ ತೆರಳಿ ಪವಿತ್ರ ವಿಧಿವಿಧಾನಗಳನ್ನು ನೆರವೇರಿಸಿ, ಭಕ್ತರ ದಂಡಿನೊAದಿಗೆ ಮೌನೇಶ್ವರ ದೇವಸ್ಥಾನಕ್ಕೆ ಆಗಮಿಸಿ ಗರ್ಭಗುಡಿ ಪ್ರವೇಶಿಸಲಾಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುಣ್ಯಸಂಪಾದನೆ ಮಾಡಿದರು. ಭಕ್ತರ ಅಪಾರ ಸ್ಪಂದನೆ ಹಾಗೂ ಗ್ರಾಮಸ್ಥರ ಸಂಘಟಿತ ವ್ಯವಸ್ಥೆಯಿಂದ ಜಾತ್ರೆ ಯಶಸ್ವಿಯಾಗಿ ನೆರವೇರಿದುದು ಗಮನಾರ್ಹವಾಗಿದೆ.