Home ಜಿಲ್ಲೆ ಕಲಬುರಗಿ ಸಸಿ ನೆಟ್ಟು ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ

ಸಸಿ ನೆಟ್ಟು ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ

ಕಲಬುರಗಿ,ಜೂ 24: ಇವತ್ತು ಪರಿಸರ ಅಸಮತೋಲನದಿಂದ ಸಕಾಲಕ್ಕೆ ಮಳೆ ಬರದೆ ಅನೇಕ ಸಮಸ್ಯೆಗಳು ಎದುರಿಸುತ್ತಿರುವವರ ಜೊತೆಗೆ ಶುದ್ಧವಾದ ಗಾಳಿ ಕೊರತೆಯಿಂದ ಆರೋಗ್ಯದಲ್ಲಿಯೂ ಏರುಪೇರು ಆಗುತ್ತಿದೆ ಆದ್ದರಿಂದ ಸಸಿ ನೆಟ್ಟು ಅವುಗಳನ್ನ ಪೆÇೀಷಿಸುವ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಭುದೇವ ನಗರ ಪ್ರತಿಷ್ಠಾನ ಅಧ್ಯಕ್ಷ ಡಾ. ರಾಜಶೇಖರ್ ಪಾಟೀಲ್ ಹೆಬ್ಳಿಯವರು ಅಭಿಪ್ರಾಯಪಟ್ಟರು
ನಗರದ ಕೃಷಿ ಮಾರುಕಟ್ಟೆ ಆವರಣದ ನೆಹರು ಗಂಜಿನಲ್ಲಿ ವಿಶ್ವ ಪರಿಸರ ದಿನವನ್ನು ಸಸಿ ನೆಟ್ಟು ರೈತರಿಗೆ ಸಸಿಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ಮಾತನಾಡಿ, ಸಸಿಗಳನ್ನು ನಾವು ಬೆಳೆಸಿದರೆ ನಮ್ಮನ್ನು ಅವುಗಳನ್ನು ಸಮೃದ್ಧಿಯಿಂದ ಬದುಕು ಕೊಡುತ್ತವೆ. ಆದ್ದರಿಂದ ರೈತರು ತಮ್ಮ ತಮ್ಮ ಬದುಗಳಲ್ಲಿ ಹಣ್ಣಿನ ಗಿಡಗಳು ಬೆಳೆಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ್ ಪಾಟೀಲ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಭಗವಂತ. ಹನುಮಂತ್ ರಾಯ ಜವಳಿ ಉಪಸ್ಥಿತರಿದ್ದರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಮಂಜುನಾಥ ಗುತ್ತಿರಗಾವ್ ಕೋರಿದರೆ ನಾಗರಾಜ ಪಾಟೀಲ್ ನಿರೂಪಿಸಿದರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಉಪಸ್ಥಿತರಿದ್ದರು.