
ಸೇಡಂ,ಜೂ,24: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಸೈಬರ್ ಅಪರಾಧಗಳ ಪೈಕಿ ಡಿಜಿಟಲ್ ಅರೆಸ್ಟ್ ಅತ್ಯಂತ ಅಪಾಯಕಾರಿಯಾಗಿದ್ದು, ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಹಾಗೂ ಯುವಜನರು ಇಂತಹ ಜಾಲಕ್ಕೆ ಬಲಿಯಾಗದೆ ತೀವ್ರ ಮುಂಜಾಗ್ರತೆ ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಶಹಾಬಾದ ಡಿ.ವೈ.ಎಸ್.ಪಿ. ಶಂಕರಗೌಡ ಪಾಟೀಲ ಅವರು ಎಚ್ಚರಿಸಿದ್ದಾರೆ.
ನಗರದಲ್ಲಿರುವ ಕಂಪ್ಯೂಸಿಸ್ ಪಾಯಿಂಟ್ ನಲ್ಲಿ ವಿವಿಧ ಕಂಪ್ಯೂಟರ್ ತರಬೇತಿ ಪಡೆದ 50 ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರಕಾರದ ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಕಳೆದ 31 ವರ್ಷಗಳಿಂದ ಸೇಡಂನಲ್ಲಿ ಕಂಪ್ಯೂಟರ್ ಜ್ಞಾನ ನೀಡುತ್ತಿರುವ ಕಂಪ್ಯೂಸಿಸ್ ಪಾಯಿಂಟ್ ನ ವ್ಯವಸ್ಥಾಪಕರಾದ ಶ್ರೀಮತಿ ತನುಜಾ ಹಾಗೂ ದತ್ತಾತ್ರೇಯ ಐನಾಪೂರ ದಂಪತಿಗಳ ಸೇವೆಯನ್ನು ಶ್ಲಾಘಿಸಿದ ಅವರು ಹಲವಾರು ಸವಾಲುಗಳ ಮಧ್ಯೆಯೂ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಇವರ ಸೇವೆ ಅತ್ಯಮೂಲ್ಯ ಹಾಗೂ ದೂರದೃಷ್ಟಿಯಿಂದ ಕೂಡಿದ್ದು ಎಂದರು.ಸ್ವಾಗತಿಸಿ ಪ್ರಾಸ್ತಾವಿಕವಾಗಿ ದತ್ತಾತ್ರೇಯ ಶೇಷಯ್ಯ ಐನಾಪೂರ ಸಂಸ್ಥೆಯ ಬಗ್ಗೆ ಪರಿಚಯ ಮಾಡಿದರೆ, ಕು. ನಾಗೇಂದ್ರಮ್ಮ ಮತ್ತು ಕು. ಪ್ರಿಯಾಂಕಾ ಪ್ರಾರ್ಥನಾ ಗೀತೆಯನ್ನು ಹಾಡಿದರು,ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಕು.ಸುನಿತಾ ವಂದನಾರ್ಪಣೆ ಕು. ಸೋನಿಕುಮಾರಿ ನೆರವೇರಿಸಿದರು. ಈ ವೇಳೆಯಲ್ಲಿ ವಿವಿಧ ತರಬೇತಿ ಪಡೆದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು




















