Home ಜಿಲ್ಲೆ ಗುರುಗಳನ್ನು ಗೌರವಿಸುವ ದಿನವಾಗಿದೆ:ಲಿಂಗಾರೆಡ್ಡಿ ನಾಯಕ

ಗುರುಗಳನ್ನು ಗೌರವಿಸುವ ದಿನವಾಗಿದೆ:ಲಿಂಗಾರೆಡ್ಡಿ ನಾಯಕ

ಸೈದಾಪುರ:ಜ್ಞಾನವನ್ನು ಧಾರೆ ಎರೆದು ಪ್ರತಿಯೊಬ್ಬರ ಯಶಸ್ಸಿನ ಜೀವನದ ಏಳಿಗೆಗೆ ಕಾರಣರಾದ ಗುರು ವೃಂದವನ್ನು ನೆನಪಿಸಿ ಗೌರವಿಸುವ ದಿನವೇ ಶಿಕ್ಷಕರ ದಿನವಾಗಿದೆ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾ ವರ್ಧಕ ಸಂಸ್ಥೆಯ ವಿವಿಧ ವಿಭಾಗಗಳಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರು ತಮ್ಮ ಜನ್ಮ ದಿನವನ್ನು ಶಿಕ್ಷಕ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿ ಶಿಕ್ಷಕ ಸಮೂದಾಯವನ್ನು ಗೌರವಿಸುವಂತೆ ಮಾಡಿದ್ದಾರೆ. ಮಹತ್ವ ಹೆಚ್ಚಾಗುವಂತೆ ಮಾಡಲು ಶಿಕ್ಷಕರು ಸಮರ್ಪಣಾ ಭಾವನೆಯೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು. ಸಿಬ್ಬಂದಿ ಸತೀಶ ಪುರ್ಮಾ ಪ್ರೌಢ ಶಾಲಾ ವಿಭಾಗದಿಂದ ಕಾರ್ಯಕ್ರಮ ಆಯೋಜನೆ ಮಾಡಿದರು. ಮುಖ್ಯಗುರು ಲಿಂಗಾರೆಡ್ಡಿ ನಾಯಕ, ನಿವೃತ್ತಾ ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ದೇವಿಂದ್ರ ಪೀರಾ, ಗೂಳಪ್ಪ.ಎಸ್.ಮಲ್ಹಾರ, ರಾಚಯ್ಯ ಸ್ವಾಮಿ ಬಾಡಿಯಾಲ, ಕಾಶಿನಾಥ ಶೇಕಸಿಂದಿ, ವಿಶ್ವನಾಥರೆಡ್ಡಿ ಕಣೇಕಲ್, ಶಿವಕುಮಾರ ಬಂಡಿ, ರಾಜಶೇಖರ ಪಾಟೀಲ, ಭೀಮಣ್ಣ ನಾಯಕ, ಚಂದ್ರಶೇಖರ ಡೊಣ್ಣೆಗೌಡ, ಸಂಗಾರೆಡ್ಡಿ, ತೋಟೆಂದ್ರ, ಸತೀಶ, ನಿಜಗುಣಚಾರ್ಯ, ಅಭಿಲಾಷ, ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಇತರರಿದ್ದರು.