Home ಜಿಲ್ಲೆ ಕಲಬುರಗಿ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಇಂಟ್ರಾ-ಸ್ಕೂಲ್ ಸ್ಪೆಲ್ಲಿಂಗ್ ಬಿ ಸ್ಪರ್ಧೆ(ಗ್ರೇಡ್ 2)

ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಇಂಟ್ರಾ-ಸ್ಕೂಲ್ ಸ್ಪೆಲ್ಲಿಂಗ್ ಬಿ ಸ್ಪರ್ಧೆ(ಗ್ರೇಡ್ 2)

ಕಲಬುರಗಿ:2026-27ನೇ ಶೈಕ್ಷಣಿಕ ವರ್ಷದ 6ನೇ ಅಧ್ಯಾಯದ ಇಂಟ್ರಾ-ಸ್ಕೂಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆ ಸೆಪ್ಟೆಂಬರ್ 08, 2026ಮಂಗಳವಾರದಂದು ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಎರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಎರಡನೆಯ ತರಗತಿಯ 235 ವಿದ್ಯಾರ್ಥಿಗಳಿಗೆ, ಈ ಮೊದಲು ಬರವಣಿಗೆಯಲ್ಲಿ ಮೂರು ಸುತ್ತುಗಳನ್ನು ನೆಡಸಲಾಗಿತ್ತು. ಈ ಮುರು ಸುತ್ತಿನ ಸರಾಸರಿಯ ಆಧಾರದ ಮೇಲೆ 52 ವಿದ್ಯಾರ್ಥಿಗಳನ್ನು ಆಯ್ಕೆಯಾಗಿ, ವೇದಿಕೆಯ ಮೇಲೆ ನೆಡಯುವ ಸುತ್ತುಗಳಲ್ಲಿ ಭಾಗವಹಿಸಿದರು.
ಮೌಖಿಕ ಸುತ್ತುಗಳಲ್ಲಿ ತಮಗೆ ಕೊಟ್ಟ ಶಬ್ದವನ್ನು ಸರಿಯಾಗಿ ಉತ್ತರಿಸಿ ಮುಂದಿನ ಸುತ್ತಿಗೆ ಅರ್ಹರಾದರು. ತಪ್ಪಾಗಿ ಉತ್ತರಿಸಿದ ವಿದ್ಯಾರ್ಥಿ ಸ್ಪರ್ಧೆಯಿಂದ ಹೊರಗಾದರು. ಹೀಗೆ ನೆಡೆದ 13 ಸುತ್ತುಗಳ ನಂತರ ಮೂರೂ ವಿದ್ಯಾರ್ಥಿಗಳು ಮೊದಲ ಮೂರೂ ಸ್ಥಾನಕ್ಕೆ ಪೈಪೆÇೀಟಿ ನೆಡೆಸಿದರು. 14ನೆಯ ಸುತ್ತಿನಲ್ಲಿ ನೆಡದ ರಾಪಿಡ್ ಫೈರ್ ನಲ್ಲಿ ಪ್ರತಿ ಸ್ಪರ್ಧಿಗೆ ಕೊಟ್ಟ 10 ಶಬ್ದಗಳಲ್ಲಿ ವಿಜೇತರನ್ನು ಗುರುತಿಸಲಾಯಿತು.
ರಾಪಿಡ್ ಫೈರ್ ನಲ್ಲಿ ಕುಮಾರ ಸಾತ್ವಿಕ್ ಕಿರಣಗಿ, 10 ರಲ್ಲಿ 9 ಶಬ್ದಗಳನ್ನು ಸರಿಯಾಗಿ ಉತ್ತರಿಸಿ ಪ್ರಥಮ ಸ್ಥಾನ ಪಡೆದರೆ, ಕುಮಾರಿ ಆರಾಧ್ಯ ಖಜೂರಗಿ 10 ರಲ್ಲಿ 8 ಶಬ್ದಗಳನ್ನು ಸರಿಯಾಗಿ ಉತ್ತರಿಸಿ ದ್ವಿತೀಯ ಸ್ಥಾನ ಪಡೆದು, 10 ರಲ್ಲಿ 7 ಶಬ್ದಗಳನ್ನು ಸರಿಯಾಗಿ ಉತ್ತರಿಸಿ ಕುಮಾರ ಸ್ರೇಯಸ್ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಹಲವು ಸುತ್ತಿನ ತೀವ್ರ ಸ್ಪೆಲ್ಲಿಂಗ್ ಸವಾಲುಗಳನ್ನ ಯಶಸ್ವಿಯಾಗಿ ಯದುರಿಸಿ, ತ್ವರಿತ ಚಿಂತನೆ ಹಾಗೂ ಆತ್ಮವಿಶ್ವಾಸದ ಪ್ರದರ್ಶನಗಳ ನಂತರ, ವಿಜೇತರ ಸನ್ಮಾನದೊಂದಿಗೆ, ಈ ಅದ್ಭುತ ಸ್ಪರ್ಧೆ ಎರಡನೆಯ ತರಗತಿಗೆ ಮುಕ್ತಾಯವಾಯಿತು. ವಿಜೇತರಿಗೆ ಪಾರಿತೋಷಕ, ಪ್ರಶಂಸೆ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಸ್ಪರ್ಧೆಯು ಸೆಪ್ಟೆಂಬರ್ 2026ರ ಅಂತ್ಯದವರೆಗೆ ಮುಂದುವರಿಯಲಿದ್ದು ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳು ತಮ್ಮ ಭಾಗವಹಿಸುವಿಕೆಯನ್ನು ಪೂರ್ಣಗೊಳಿಸುವವರೆಗೆ ನಡೆಯಲಿದೆ.