
ನವಲಗುಂದ,ಜು೧೨: ಪ್ರತಿ ಶಾಲೆಯಲ್ಲಿ ಸೇವಾದಳ ಘಟಕವನ್ನು ಶಾಲೆಯಲ್ಲಿ ಸಮರ್ಪಕವಾಗಿ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು ದೇಶಪ್ರೇಮ ರಾಷ್ಟಿçÃಯ ಭಾವೈಕ್ಯತೆಯ ಗುಣಗಳನ್ನು ಬೆಳೆಸಿರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ಭಾರತ ಸೇವಾದಳ ತರಬೇತಿ ಶಿಕ್ಷಕರಲ್ಲಿ ಕರೆ ನೀಡಿದರು.
ಜಿಲ್ಲಾ ಭಾರತ್ ಸೇವಾದಳ, ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಿರ್ಲಾಪುರ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸನ್ ೨೦೨೬ -೨೦೨೭ ಸಾಲಿನಲ್ಲಿ ಭಾರತ ಸೇವಾದಳ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ಪುನಶ್ಚೇತನ ಹಾಗೂ ರಾಷ್ಟçಧ್ವಜ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನವೆಂಬರ, ಡಿಸೆಂಬರ್ ತಿಂಗಳಲ್ಲಿ ತಾಲ್ಲೂಕು ಮಟ್ಟದ ರಾಷ್ಟಿçÃಯ ಭಾವೈಕ್ಯತೆ ಮಕ್ಕಳ ಮೇಳವನ್ನ ಸಂಘಟಿಸಲು ಮಕ್ಕಳನ್ನು ಸಿದ್ಧತೆಯನ್ನು ಮಾಡಿ ಚಟುವಟಿಕೆಗಳನ್ನ ಕಲಿಸಿ ಶಿಸ್ತಿನಿಂದ ಕರೆದುಕೊಂಡು ಬರಲು ಸಲಹೆ ನೀಡಿದರು
ಜಿಲ್ಲಾ ಭಾರತ ಸೇವಾದಳ ವಿಭಾಗಿಯ ಸಂಘಟಿಕ ಪ್ರಕಾಶ್ ಪಿ ಗೋಣಿ ಪ್ರಸ್ತಾವಿಕವಾಗಿ ಮಾತನಾಡಿ ಸೇವಾದಳ ಹುಟ್ಟು ಬೆಳವಣಿಗೆ ಮತ್ತು ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ಮಾಹಿತಿ ನೀಡಿದರು
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೋಶ್ಯಾಧ್ಯಕ್ಷ ಶಂಕರಗೌಡ ರಾಯನಗೌಡ, ತಾಲ್ಲೂಕು ಅಧ್ಯಕ್ಷ ಮಂಜುನಾಥ ಕಾಲವಾಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಡಿ. ರಂಗಣ್ಣವರ , ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್, ವಿ, ಕುರುವತ್ತಿಮಠ ಮಾತನಾಡಿದರು. ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ವಿಜಯ ಕಾರಿಕಾಯಿ ಅಧ್ಯಕ್ಷತೆ ವಹಿಸಿದ್ದರು.
ಪರ್ವತಗೌಡ ರಾಯನಗೌಡ, ಮಾಲತೇಶ ನೀಲಣ್ಣವರ, ಪ್ರಕಾಶಗೌಡ ಪಾಟೀಲ, ಎಸ್. ಎಂ. ಫಕ್ಕೀರಗೌಡ,ವಿ.ಆರ್. ಹಾದಿಮನಿ, ಎ.ಆರ್.ಅಕ್ಕಿ, ಬಿ.ವಿ.ಅಂಗಡಿ, ಎಂ. ಎ. ಹುಬ್ಬಳ್ಳಿ , ಬಸವರಾಜ ಗುರಿಕಾರ, ಎಂ.ಬಿ ಇಟಗಿ ಸೇರಿ ತಾಲ್ಲೂಕಿನ ಪ್ರಾಥಮಿಕ ಪ್ರೌಢಶಾಲೆಗಳ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು
ಬಿ.ಕೆ.ಹಾಲವರ ಸ್ವಾಗತಿಸಿದರು, ತಾಲ್ಲೂಕು ಅಧಿನಾಯಕ ಎಸ್ ಬಿ ಅಂಗಡಿ ಗೌರವ ರಕ್ಷೆ ನೀಡಿ ವಂದಿಸಿದರು.































