
ಕಾಳಗಿ: ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಕೋಲಿ, ಕಬ್ಬಲಿಗ ಸಮುದಾಯದ ಒಬ್ಬರಿಗೂ ಮಂತ್ರಿ ಸ್ಥಾನ ಕೊಡದೆ ಅನ್ಯಾಯ ಮಾಡಲಾಗಿದೆ ಕಾಂಗ್ರೆಸ್ ಸರಕಾರದ ಈ ನಿರ್ಧಾರ ಸಮಾಜಕ್ಕೆ ಕೊಡ್ಲಿ ಪೆಟ್ಟು ಕೊಟ್ಟಂತಾಗಿದೆ ಎಂದು ಕಲಬುರಗಿ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ರವಿರಾಜ ಕೋರವಿ ಹೇಳಿದರು.
ಗುರುವಾರ ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವಂತಹ ಕೋಲಿ ಸಮಾಜಕ್ಕೆ ಒಂದೂ ಸ್ಥಾನ ಕೊಡದಿರುವುದು ಯಾವ ನ್ಯಾಯ? ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಜಿ ರವರು ಆದಷ್ಟು ಬೇಗ ನಮ್ಮ ಬೇಡಿಕೆಯನ್ನು ಪರಿಗಣಿಸಿ ಸಮಾಜದ ನಾಯಕರಿಗೆ ಸಚಿವ ಸ್ಥಾನ ಕೊಡಬೇಕು.
‘ಎಐಸಿಸಿ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರು ಕಾಣಿಸಿಕೊಂಡಿತ್ತು. ಕರಾವಳಿ ಭಾಗದವರು ಆಗಿದ್ದರೂ ನಮ್ಮ ಸಮಾಜದವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ ಎನ್ನುವಷ್ಟರಲ್ಲಿ ಅವರ ಹೆಸರು ಕೈಬಿಟ್ಟು, ಬೇರೆ ಸಮಾಜದವರನ್ನು ಸೇರಿಸಲಾಗಿದೆ. ಸದರಂತೇ ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕ ಸಮಾಜದ ಮುತ್ಸದಿ ರಾಜಕಾರಣಿ ತಿಪ್ಪಣ್ಣಪ್ಪ ಕಮಕನೂರ ಹಂತರ ನಾಯಕರು ಒಬ್ಬಿರಿದ್ದು ಇಂತಹ ನಾಯಕರನ್ನು ಪರಿಗಣಿಸದೆ ಅನ್ಯಾಯವನ್ನು ಮಾಡಿದ್ದು ಕೋಲಿ ಸಮಾಜಕ್ಕೆ ಸಹಿಸಲು ಆಗುವುದಿಲ್ಲ’ ಮುಂದಿನ ದಿನಮಾನದಲ್ಲಿ ಕಾಂಗ್ರೆಸ್ ಸರಕಾರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹರಿಹಾಯ್ದರು.































