
ಚಿತ್ತಾಪುರ.ಜೂ.16: ಮನುಷ್ಯರಿಗೆ ಗ್ರಂಥಾಲಯವೇ ಜ್ಞಾನದ ಭಂಡಾರವಾಗಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ ಹೇಳಿದರು.
ತಾಲೂಕಿನ ಇಂಗನಕಲ ಗ್ರಾಮದಲ್ಲಿ ನೂತನ ಗ್ರಂಥಾಲಯ ಉಪ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುತುವರ್ಜಿವಹಿಸಿ ಗ್ರಾಮಕ್ಕೆ ಗ್ರಂಥಾಲಯ ಕಲ್ಪಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ. ಅದು ಜ್ಞಾನದ ದೇವಾಲಯವಾಗಿದೆ. ಇಲ್ಲಿರುವ ಪುಸ್ತಕಗಳು ನಮ್ಮ ಚಿಂತನೆಗೆ ದಿಕ್ಕು ನೀಡುತ್ತವೆ.ಈ ಗ್ರಂಥಾಲಯ ಕೇಂದ್ರವು ವಿದ್ಯಾರ್ಥಿಗಳ ಜತೆಗೆ ಗ್ರಾಮಸ್ಥರಿಗೂ ಅನುಕೂಲವಾಗಲಿ ಎಂದು ಸ್ಥಾಪಿಸಲಾಗಿದೆ. ಗ್ರಾಮದಲ್ಲಿ ಹರಟೆ ಹೊಡೆಯುವುದಕ್ಕಿಂತ ಪತ್ರಿಕೆ, ಪುಸ್ತಕಗಳು ಓದಿ ಜ್ಞಾನ ಪಡೆಯಲೆಂದು ಆಶಿಸಿದರು.ಪುಸ್ತಕಗಳು, ಪತ್ರಿಕೆಗಳು ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಗ್ರಾಮಸ್ಥರು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ನಾಯಕ ಮಾತನಾಡಿದರು.ಗುಂಡಗುರ್ತಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಬಣ್ಣಕ್ಕಿ ಅಧ್ಯಕ್ಷತೆವಹಿಸಿದ್ದರು.ಗ್ರಾಪಂ ಮಾಜಿ ಉಪಾಧ್ಯಕ್ಷ ಸಿದ್ದಣ್ಣ ಮಗಿ, ಮಾಜಿ ಸದಸ್ಯ ಈರಣ್ಣ ದಂಡೋತಿ, ಪ್ರಮುಖರಾದ ದೇವಾನಂದ ಮಂಗಲಗಿ, ರುಕಮಶಾ ದುಕಾನದಾರ, ಹಾಜಿಸಾಬ ದುಕಾನದಾರ, ಮಲ್ಲಪ್ಪ ನಿಡಗುಂದಿ, ಶಿವಯೋಗಿ ಹೊಸಮನಿ, ಶರಣಪ್ಪ ಕದ್ದರಗಿ, ನಾಗರಾಜ ಬಂಡಿವಡ್ಡರ, ಕಲ್ಯಾಣಿ ಪೂಜಾರಿ, ದೀಪಕ ಹೊಸಮನಿ, ಯಲ್ಲಾಲಿಂಗ ನಿಡಗುಂದಿ ಸೇರಿದಂತೆ ಇತರರಿದ್ದರು.ನಾಗರಾಜ ಗಾಯಕವಾಡ ನಿರೂಪಿಸಿದರು.


























