Home ಜಿಲ್ಲೆ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

ಚನ್ನಮ್ಮನ ಕಿತ್ತೂರು,ಸೆ೫: ಯಶಸ್ಸು ಕಾಣಲು ಇಚ್ಛಾ-ಆತ್ಮ-ಜ್ಞಾನಶಕ್ತಿಗಳು ಈ ಮೂರು ಅಂಶಗಳು ಮುಖ್ಯವಾಗಿವೆ ಎಂದು ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರೋ. ಡಾ. ಬಿ. ಎಸ್. ನಾವಿ ಹೇಳಿದರು.


ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ, ಐ.ಕ್ಯೂ.ಎಸಿ ಘಟಕ, ಎನ್.ಎಸ್.ಎಸ್, ಎನ್.ಸಿ.ಸಿ, ಮಹಿಳಾ ವೇದಿಕೆ ವಿವಿಧ ಘಟಕಗಳು ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಇಚ್ಛಾ ಶಕ್ತಿ ದೊಡ್ಡದಾಗಿರಬೇಕು, ಈ ಇಚ್ಛಾ ಶಕ್ತಿಯನ್ನು ಪೂರೈಸುವ ಆತ್ಮ ಶಕ್ತಿ ನಮ್ಮಲ್ಲಿರಬೇಕು ಯಾವುದೇ ಕಾರಣಕ್ಕೂ ನಮ್ಮ ಆತ್ಮ ಶಕ್ತಿಯನ್ನು ಕಳೆದುಕೊಳ್ಳಬಾರದು, ಇಚ್ಛಾ ಶಕ್ತಿ, ಆತ್ಮ ಶಕ್ತಿಯೊಂದಿಗೆ ನಮ್ಮದೇ ಆದ ಕೌಶಲ್ಯಗಳನ್ನು ರೂಢಿಸಿಕೊಂಡು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಾಗ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.


ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಗದೀಶ ಎಸ್. ಗಸ್ತಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ಕ್ರೀಡೆಗಳಿಂದ ಸದೃಢ ಶರೀರ ಹೊಂದಿದಾಗ ಮಾತ್ರ ನಮ್ಮ ಮನಸ್ಸು ಸದೃಢಗೊಂಡು ಯಾವುದೇ ಆತಂಕಕ್ಕೆ ಒಳಗಾಗುವುದಿಲ್ಲ ಕ್ರೀಡೆಗಳು ಎಂದಿಗೂ ನಮ್ಮ ಆತ್ಮಸ್ಥೆöÊರ್ಯವನ್ನು ಕುಗ್ಗಿಸುವುದಿಲ್ಲವೆಂದರು.


ಕಿನಾವಿವ ಸಂಘದ ಚೇರಮನ್ನ ಶಂಕರ ವಳಸಂಗ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಅಭಿವೃದ್ಧಿಗೆ ಒಳ್ಳೆಯ ಸೌಲಭ್ಯಗಳನ್ನು ಒದಗಿಸಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ನಾಡಿಗೆ-ಸಂಸ್ಥೆಗೆ ಕೀರ್ತಿ ತರಬೇಕೆಂದರು.


ಉಪಾಧ್ಯಕ್ಷ ಅರುಣಕುಮಾರ ಬಿಕ್ಕಣ್ಣವರ, ವಾಯಿಸ್ ಚೇರಮನ್ನ ಜೆ. ಬಿ. ಘಟ್ನಟ್ಟಿ, ಗೌರವ ಕಾರ್ಯದರ್ಶಿ ಜೆ.ಎಸ್.ಬಿಕ್ಕಣ್ಣವರ, ನಿರ್ದೇಶಕರು ಉಮಾಕಾಂತ ಭಾರತಿ, ಜಗದೀಶ ವಸ್ತçದ, ವ್ಹಿ.ಆರ್.ಪಾಟೀಲ, ವಿದ್ಯಾರ್ಥಿ ಬಸವರಾಜ ಬೆಳಗಾವಿ, ü ಸೌಮ್ಯಾ, ಮಹೇಕ ಮುಲ್ಲಾ, ಅರ್ಚನಾ ಕಳಸಣ್ಣವರ ಪ್ರಾರ್ಥನೆ, ಪಿ. ಬಿ. ಹೊನ್ನಪ್ಪವರ ಸ್ವಾಗತಿಸಿದರು, ಪ್ರಾಚಾರ್ಯ ನಾಗರಾಜ ಎಚ್. ಕೆ. ಅತಿಥಿಗಳನ್ನು ಪರಿಚಯಿಸಿದರು, ಆನಂದ ಕರೆಪ್ಪನವರ ವರದಿ ವಾಚನ ಮಂಡಿಸಿದರು. ವಂದನಾರ್ಪಣೆ ಡಾ. ಹೊನ್ನರಾಜು ಎಸ್. ವ್ಹಿ., ನಿರೂಪಣೆ ಡಾ. ಸಂಗೀತಾ ತೋಲಗಿ ಮಾಡಿದರು.