
ಕಲಬುರಗಿ, ಸೆ. 5: ಕರುಣೆಶ್ವರ ನಗರದ ಶ್ರೀ ಜೈ ವೀರ ಹನುಮಾನ್ ಮಂದಿರದಲ್ಲಿ ಶುಕ್ರವಾರ, ಸೆಪ್ಟೆಂಬರ್ 04 ರಂದು, ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು.
ಜನ್ಮಾಷ್ಟಮಿಯ ಅಂಗವಾಗಿ ಶ್ರೀ ಕೃಷ್ಣನಿಗೆ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ಶ್ರೀ ಕೃಷ್ಣನ ಭಕ್ತಿಗೀತೆಗಳನ್ನು ಹಾಡಿ ಭಜನೆ ಸಲ್ಲಿಸಿದರು. ಮಹಿಳೆಯರು ಹಾಗೂ ಯುವತಿಯರು ಸಾಂಪ್ರದಾಯಿಕ ಕೋಲಾಟ ಪ್ರದರ್ಶಿಸಿ ಭಕ್ತಿಭಾವ ಮೆರೆದರು.
ಮಹೋತ್ಸವದ ಅಂಗವಾಗಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಪ್ರದ್ಯುಮ್ನಾಚಾರ್ಯ ಜೋಶಿ ಅವರ ವೈದಿಕತ್ವದಲ್ಲಿ, ಭಕ್ತರಿಂದ ಅಘ್ರ್ಯ ಪ್ರಧಾನ, ಶ್ರೀ ಕೃಷ್ಣನ ತೊಟ್ಟಿಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನ ದರ್ಶನ ಪಡೆದು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಸೇವಕರ್ತರನ್ನು ಸನ್ಮಾನಿಸಲಾಯಿತು.
ಸೆಪ್ಟೆಂಬರ್ 05ರ ಸಂಜೆ ಮಂದಿರದಲ್ಲಿ ಗೋಪಾಲಕಾವಲಿ ಹಾಗೂ ಮಕ್ಕಳಿಂದ ಶ್ರೀಕೃಷ್ಣ ಮತ್ತು ರಾಧಾಕೃಷ್ಣ ವೇಷಧಾರಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶ್ರೀ ಜೈ ಹನುಮಾನ್ ಮಂದಿರದ ಅಧ್ಯಕ್ಷ ಅವಿನಾಶ್ ಕುಲಕರ್ಣಿ, ವಿಶ್ವಾಸ ಮೋಘೇಕರ್, ವಿನುತ ಜೋಶಿ, ರಾಘವೇಂದ್ರ ಕುಲಕರ್ಣಿ, ಚಿದಂಬರ ದೇಶಪಾಂಡೆ, ಹನುಮೇಶರಾವ್, ವಿಜಯ ಕುಲಕರ್ಣಿ,ಸಮೀರ್ ಕುಲಕರ್ಣಿ, ವಿನೋದ್ ಸಾಥಖೇಡ, ಪ್ರಭಂಜನ್ ಬಂಡಿ, ರಾಕೇಶ್ ಕುಲಕರ್ಣಿ, ಶ್ರೀಷಾ ಕುಲಕರ್ಣಿ, ಸವಿತಾ ಕುಲಕರ್ಣಿ, ವಿನುತಾ ರಾಘವೇಂದ್ರ, ಕವಿತಾ ಶರ್ಮಾ, ವಿಜಯಲಕ್ಷ್ಮಿ, ರೇಖಾ ಕುಲಕರ್ಣಿ, ವೀಣಾ ಸಾಥಖೇಡ, ಪೂಜಾ ಕುಲಕರ್ಣಿ, ಸುಚಿತ್ರ ಕುಲಕರ್ಣಿ, ಪದ್ಮಾ ಪುರೋಹಿತ್, ಅರ್ಚಕ ವೆಂಕಟೇಶಾಚಾರ್ಯ ನೆಲೋಗಿ, ವ್ಯವಸ್ಥಾಪಕ ಚಂದ್ರಕಾಂತ ಕಡಗಂಚಿ, ಇತರರಿದ್ದರು.






























