Home ಜಿಲ್ಲೆ ಕಲಬುರಗಿ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ

ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ

ಕಲಬುರಗಿ:ಗುರು ಎಂದರೆ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಮಾರ್ಗದರ್ಶಕರು. ಶಿಕ್ಷಕರು ಮಕ್ಕಳ ಬಾಳಿಗೆ, ಜೀವನಕ್ಕೆ ಉತ್ತಮ ಪ್ರೇರಕರು. ವಿದ್ಯೆಗಿಂತ ದೊಡ್ಡ ಸಂಪತ್ತಿಲ್ಲ ಗುರುವಿಗಿಂತ ದೊಡ್ಡ ಜ್ಞಾನಿ ಇಲ್ಲ. ಅಲ್ಲದೇ ವಿದ್ಯಾರ್ಥಿಯ ಜೀವನಕ್ಕೆ ಜ್ಞಾನದ ದೀಪವನ್ನು ಬೆಳಗಿಸುವವರು ಶಿಕ್ಷಕರು. ಶಿಕ್ಷಕ ವೃತ್ತಿಗೆ ತನ್ನದೆ ಆದ ಪವಿತ್ರ ಸ್ಥಾನವಿದೆ. ಶಿಕ್ಷಕ ವೃತ್ತಿಯು ರಾಷ್ಟ್ರ ನಿರ್ಮಾಣದಲ್ಲಿ ಹಾಗೂ ಮಕ್ಕಳಲ್ಲಿ ಶಿಸ್ತು, ಮಾನವೀಯ ಮೌಲ್ಯ, ದೇಶಪ್ರೇಮ ಬೆಳೆಸುವಲ್ಲಿ ಮಹತ್ತರವಾದ ಪಾತ್ರವಿದೆ. ಶಿಕ್ಷಣದಿಂದಲೇ ಬಾಳು ಬಂಗಾರ ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಮಕ್ಕಳ ಬಾಳಿಗೆ ಬೆಳಕು ನೀಡುವವರು ಶಿಕ್ಷಕರು ಎಂದು ಶಾಲೆಯ ಪ್ರಾಂಶುಪಾಲರಾದ ನಾಗೇಂದ್ರ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಕಾಲೇಜಿನ ಎಲ್ಲ ಶಿಕ್ಷಕರು ಬೋಧಕೇತರ ವರ್ಗ ಉಪಸ್ಥಿತರಿದ್ದರು. ಎಲ್ಲ ಮಕ್ಕಳು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದರು. ಈ ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಯ ಅಧ್ಯಕ್ಷರಾದ ಬಸವರಾಜ ಭೀಮಳ್ಳಿ ಉಪಾಧ್ಯಕ್ಷರು ಹಾಗೂ ಅಫಜಲಪುರ ಶಾಸಕರಾದ ಎಂ.ವೈ.ಪಾಟೀಲ್ ಹಾಗೂ ಕಾರ್ಯದರ್ಶಿಗಳಾದ ಶಿವಪುತ್ರಪ್ಪ ಡೆಂಕಿ ಸಮಸ್ತ ಗುರವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.