Home ಕ್ರೈಂ ಸುದ್ದಿಗಳು ಸಾವಳಗಿಯಲ್ಲಿ ಅಕ್ರಮ ಅಕ್ಕಿ ಸಾಗಾಟಕ್ಕೆ ಬ್ರೇಕ್..! 244 ಚೀಲಗಳ ಸಹಿತ 13.5 ಟನ್ ಅಕ್ಕಿ ಜಪ್ತಿ;...

ಸಾವಳಗಿಯಲ್ಲಿ ಅಕ್ರಮ ಅಕ್ಕಿ ಸಾಗಾಟಕ್ಕೆ ಬ್ರೇಕ್..! 244 ಚೀಲಗಳ ಸಹಿತ 13.5 ಟನ್ ಅಕ್ಕಿ ಜಪ್ತಿ; ಇಬ್ಬರ ವಿರುದ್ಧ ಕೇಸ್

ಜಮಖಂಡಿ, ಆ.11:ಸಾವಳಗಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಪಾರ ಪ್ರಮಾಣದ ಅಕ್ಕಿಯನ್ನು ಪೆÇಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಒಟ್ಟು 244 ಚೀಲಗಳಲ್ಲಿ 13,540 ಕೆ.ಜಿ. ಅಕ್ಕಿ, ಅಂದಾಜು ?3,04,650 ಮೌಲ್ಯದ ಅಕ್ಕಿ ಜಪ್ತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಚಿಕ್ಕಪಡಸಲಗಿ-ನಾಗನೂರು ಗ್ರಾಮ ರಸ್ತೆ ಸಮೀಪದ ಜಮೀನು ಆರ್.ಎಸ್. ನಂ.11/3ಎ/2ರ ರಸ್ತೆಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಶಿರಸ್ತೆದಾರ್ ಬಸವರಾಜ ತಾಳಿಕೋಟಿ, ಗ್ರಾಮ ಆಡಳಿತ ಅಧಿಕಾರಿಗಳಾದ ಚಿದಾನಂದ ಕಿತ್ತೂರು ಹಾಗೂ ಭರತ ವಾಘಮೊಡೆ ಮತ್ತು ಸಾವಳಗಿ ಪೆÇಲೀಸರು ಆ.10ರಂದು ಬೆಳಗ್ಗೆ ಸುಮಾರು 9.30ಕ್ಕೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಅಕ್ಕಿ ಚೀಲಗಳನ್ನು ಪರಿಶೀಲಿಸಿದಾಗ 244 ಚೀಲಗಳಲ್ಲಿ ಒಟ್ಟು 13,540 ಕೆ.ಜಿ. ಅಕ್ಕಿ ಪತ್ತೆಯಾಗಿದೆ. ಅಕ್ಕಿಯ ಅಂದಾಜು ಮೌಲ್ಯ ?3.04 ಲಕ್ಷ ಎಂದು ಪೆÇಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಖಂಡಿಯ ಆಶ್ಪಕ್ ಮುಬಾರಕ್ ಅವಟಿ (ಎ1) ಹಾಗೂ ಸಿದ್ದೇಶ್ವರನಗರ, ಮಜರೇವಾಡಿ, ಸೊಲ್ಲಾಪುರ ಮೂಲದ ಆಶ್ಪಕ್ ಅಬ್ದುಲ್ ಜಬ್ಬಾರ್ ಬಿರಾಜದಾರ್ (ಎ2) ವಿರುದ್ಧ ಸಾವಳಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಗೆ ವಿತರಿಸಬೇಕಾದ ಆಹಾರ ಧಾನ್ಯವನ್ನು ನಿಯಮಬಾಹಿರವಾಗಿ ಸಾಗಾಟ ಹಾಗೂ ವ್ಯವಹಾರ ಮಾಡಿರುವ ಆರೋಪದಡಿ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಕ್ಕಿ ಸಾಗಾಟಕ್ಕೆ ಬಳಸಲಾಗಿದ್ದ ವಾಹನ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಅಂಶಗಳ ಕುರಿತು ಪೆÇಲೀಸರು ತನಿಖೆ ಮುಂದುವರಿಸಿದ್ದಾರೆ.

ಆಹಾರ ನೀರಿಕ್ಷಕ ಆನಂದ ರಾಠೊಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು