Home ಜಿಲ್ಲೆ ಬೆಂಗಳೂರು ಬುದ್ಧನ ಮಾರ್ಗ ಅನುಸರಿಸಿದರೆ ವಿಶ್ವದಲ್ಲಿ ಶಾಂತಿ

ಬುದ್ಧನ ಮಾರ್ಗ ಅನುಸರಿಸಿದರೆ ವಿಶ್ವದಲ್ಲಿ ಶಾಂತಿ

ಆನೇಕಲ್. ಮೇ. ೦೩ – ಪ್ರಪಂಚಕ್ಕೆ ಶಾಂತಿ, ಅಹಿಂಸೆ ಮಾರ್ಗವನ್ನು ತೋರಿಸಿದವರು ಬುದ್ಧರು. ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿ ಸನ್ಮಾರ್ಗದಲ್ಲಿ ನಡೆಯುವಂತೆ ಸಲಹೆ ನೀಡಿದ ಮಹಾನ್ ಪುರುಷ ಬುದ್ದರಾಗಿದ್ದಾರೆ ಎಂದು ವಿಸಿಕೆ ಪಕ್ಷದ ರಾಜ್ಯ ಕಾರ್ಯದರ್ಶಿಯಾದ ಎಂ.ಸಿ. ಹಳ್ಳಿ ವೇಣು ರವರು ತಿಳಿಸಿದರು.


ಅವರು ಬುದ್ದ ಜಯಂತಿ ಅಂಗವಾಗಿ ವಿಸಿಕೆ ಪಕ್ಷದ ವತಿಯಿಂದ ಸರ್ಜಾಪುರದ ಅಂಬೇಡ್ಕರ್ ಆಟದ ಮೈದಾನ ದಿಂದ ತ್ಯಾವಕನಹಳ್ಳಿಯ ದಮ್ಮಗಿರಿ ಅಶೋಕನಗರ ವರೆಗೂ ಹಮ್ಮಿಕೊಂಡಿದ್ದ ಬೃಹತ್ ಬೈಕ್ ಜಾಥದ ನೇತೃತ್ವ ವಹಿಸಿ ಮಾತನಾಡಿದರು. ಬುದ್ದರ ಆದರ್ಶಗಳನ್ನು ಪ್ರತಿಯೊಬ್ಬರು ಸಹ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಅವರ ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದರು. ಗೌತಮ ಬುದ್ದನ ಆದರ್ಶಗಳು ವಿಶ್ವಕ್ಕೆ ಮಾದರಿಯಾಗಿದ್ದು. ಬಿಹಾರ ರಾಜ್ಯದಲ್ಲಿರುವ ಬುದ್ದ ಗಯಾವನ್ನು ಬ್ರಾಹ್ಮಣರ ಹಿಡಿತದಿಂದ ಮುಕ್ತಿ ಗೊಳಿಸಿ ಬೌದ್ದರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಇನ್ನು ಪ್ರೀತಿ, ಕುರುಣೆ ಹಾಗೂ ಸಮಾನತೆ ಬುದ್ಧನ ಆದರ್ಶ. ಗೌತಮ ಬುದ್ಧನ ತತ್ತ್ವ ಅದರ್ಶಗಳು ಹೆಚ್ಚು ಪ್ರಚಲಿತವಾಗುತ್ತಿವೆ. ಸಾವಿರಾರು ವರ್ಷಗಳ ಹಿಂದೆ ಇದ್ದ ಬುದ್ಧ ಇಂದಿಗೂ ಪ್ರಸ್ತುತವಾಗುತ್ತಿದ್ದಾನೆ. ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆದದ್ದೇ ಆದರೆ ದೇಶ ಅಥವಾ ವಿಶ್ವದಲ್ಲಿ ಅಶಾಂತಿ, ಅಸಮಾನತೆಗೆ ಜಾಗವೇ ಇರುವುದಿಲ್ಲ ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಸರ್ಜಾಪುರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥ ಸಂಚರಿಸಿ ನಂತರ ಬುದ್ದನ ತತ್ವಗಳನ್ನು ವಿಸಿಕೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ತಿಳಿ ಹೇಳಿದರು


ಇನ್ನು ಕಾರ್ಯಕ್ರಮದಲ್ಲಿ ಹೋರಟಗಾರರಾದ ಮಾವಳ್ಳಿ ವೆಂಕಟೇಶ್, ವಕೀಲರಾದ ಚಿಕ್ಕಹಾಗಡೆ ಪುರುಷೋತ್ತಮ್, ನಂಜೇಶ್ ಪ್ರಬುದ್ದ, ಅಳೆಹಳ್ಳಿ ರಾಜು, ಸುರೇಶ್ ಪ್ರಭುದ್ಧ, ಕಾಡ ಅಗ್ರಹಾರ ಮಂಜು, ವಂದೇ ಮಾತರಂ ಮಹೇಶ್. ತಿಂಡ್ಲು ಚೌಡಪ್ಪ, ಬಡಾವಣೆ ಪ್ರಶಾಂತ್, ಮಾದಪ್ಪನ ಹಳ್ಳಿ ಮಧು, ಕೂತಗಾನಹಳ್ಳಿ ಶಶಿ, ಗುಂಡೂರು ಬಾಬು, ಗಟ್ಟಹಳ್ಳಿ ವಿಜಯ್. ವಕೀಲರಾದ ಮಂಜುನಾಥ್ ಬಾಗವಹಿಸಿದ್ದರು