Home ಜಿಲ್ಲೆ ಬೆಂಗಳೂರು ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭ

ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು.ಜೂ೧೩: ಕರ್ನಾಟಕ ವಿಡಿಯೋ ಮತ್ತು ಪೋಟೋ ಅಸೋಸಿಯೇಷನ್ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ಛಾಯಗ್ರಾಹಕರ ಸಹಕಾರದೊಂದಿಗೆ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಅಂತರಾಷ್ಟ್ರೀಯ ಮಟ್ಟದ ಪೋಟೋ ಮತ್ತು ವಿಡಿಯೋ ಪ್ರದರ್ಶನದಲ್ಲಿ ಪತ್ರಿಕಾ ಚಾಯಾಗ್ರತೆಗೆ ಪೂರ್ಣಿಮಾ ಬೆಂಗಳೂರು, ವಿಶ್ವೇಶ್ವರಪ್ಪ ಎಸ್ ಬೆಂಗಳೂರು, ಪಿ ಕೆ ಬಡಿಗೇರ್ ಬೆಳಗಾವಿ, ನಾಗರಾಜ್ ದಸ್ತಾನ ನವರ್ ಕೊಪ್ಪಳ ರುದ್ರಸ್ವಾಮಿ, ರುದ್ರಸ್ವಾಮಿ ಬಳ್ಳಾರಿ, ಅಕ್ರಮ್ ಬೆಂಗಳೂರು, ಪ್ರಗತಿ ಗೋಪಾಲಕೃಷ್ಣ ಮೈಸೂರು, ಇವರಿಗೆ ಸನ್ಮಾನ ಮಾಡಲಾಯಿತುಮುಖ್ಯ ಅತಿಥಿಗಳಾಗಿ ಎಂ.ಎಸ್.ಎಂ.ಇ.ಡೇವಲ್ ಮೆಂಟ್ ಅಧಿಕಾರಿ ದೇವರಾಜ್ ಕೆ. ಬಿ.ಬೆಂಜಮಿನ್ ಭಾಸ್ಕರ್, ಸೆಲ್ವಮುತ್ತು, ಶ್ರೀನಾಥ್, ಎಸ್.ಕೆ.ಹುಸೇನ್, ಜಾನ್ ಅಮರ್ ರಾಜ್, ರಿನಿ ರಾವಲ್, ದಿವ್ಯರವಿ , ಅಧ್ಯಕ್ಷರಾದ ಹೆಚ್.ವಿ.ಕೃಷ್ಣಪ್ಪರವರು, ಕಾರ್ಯದರ್ಶಿ ಎ.ಜಗದೀಶ್ ರವರು ಉದ್ಘಾಟನೆ ಮಾಡಿದರು.


ಕೆ.ದೇವರಾಜ್ ರವರು ಮಾತನಾಡಿ ನಮ್ಮ ಇಲಾಖೆಯ ವತಿಯಿಂದ ಪೋಟೋ ಮತ್ತು ವಿಡಿಯೋ ಪ್ರದರ್ಶನ ಮೇಳಕ್ಕೆ ನಾವು ಸಹಕಾರ ಕೊಡುತ್ತಿದ್ದೇವೆ.


ಅಧ್ಯಕ್ಷ ಹೆಚ್.ವಿ. ಕೃಷ್ಣಪ್ಪ ಮಾತನಾಡಿ ಕರ್ನಾಟಕ ಪೋಟೋ ಮತ್ತು ವಿಡಿಯೋಗ್ರಾಫರ್ಸ್ ಗಳು ಆನೇಕ ಸಮಸ್ಯೆಗಳಿಂದ ಎದುರುಸುತ್ತಿದ್ದಾರೆ. ಅವರ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ನಿಗಮ ಮಂಡಳಿ ರಚಿಸಬೇಕು.ಪೋಟೋ ಮತ್ತು ವಿಡಿಯೋಗಳು ಸಾಕ್ಷಿಯಾಗಿ ಜೀವಂತ ಪರಿಯಂತ ನಮ್ಮ ಜೊತೆಯಲ್ಲಿ ಒಂದು ಪೋಟೋ ನೂರು ಮಾತುಗಳು ಹೇಳುತ್ತದೆ. ೮೦ಜನರಿಗೆ ಕರ್ನಾಟಕ ರತ್ನ ಮಾದರಿಯಲ್ಲಿ ಛಾಯಾರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.