Home ಮುಖಪುಟ ಸುದ್ದಿ ಅನಧಿಕೃತ ವೆಂಡರ್‌ಗಳಿಗೆ ಕಸ ನೀಡಿದರೆ : ಕಠಿಣ ಕ್ರಮ

ಅನಧಿಕೃತ ವೆಂಡರ್‌ಗಳಿಗೆ ಕಸ ನೀಡಿದರೆ : ಕಠಿಣ ಕ್ರಮ

ಬೆಂಗಳೂರು, ಜು.೧೨- ಬೃಹತ್ ತ್ಯಾಜ್ಯ ಉತ್ಪಾದಕರು ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ನಿಯಮ ಉಲ್ಲಂಘಿಸಿ ಅನಧಿಕೃತ ವೆಂಡರ್‌ಗಳಿಗೆ ಕಸ ನೀಡುವವರು ಹಾಗೂ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥಿತ ಕ್ರಮ ಕೈಗೊಳ್ಳದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಎಚ್ಚರಿಕೆ ನೀಡಿದರು.


ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರು, ಘನತ್ಯಾಜ್ಯ ನಿರ್ವಹಣೆ ವಿಭಾಗದ ಎಜಿಎಂಗಳು ಹಾಗೂ ಮಾರ್ಷಲ್‌ಗಳೊಂದಿಗೆ ಅವರು ಚರ್ಚಿಸಿದರು.


ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ೧,೫೫೨ ನೋಂದಾಯಿತ ಬೃಹತ್ ತ್ಯಾಜ್ಯ ಉತ್ಪಾದಕರಿದ್ದು, ನಿಯಮ ಪಾಲಿಸದವರನ್ನು ಗುರುತಿಸಿ ಕ್ರಮ ಕೈಗೊಳ್ಳಲು ಎಜಿಎಂಗಳು, ಜೆಎಚ್‌ಐಗಳು ಹಾಗೂ ಮಾರ್ಷಲ್‌ಗಳಿಗೆ ಸೂಚಿಸಿದರು. ನಿವಾಸಿಗಳ ಕಲ್ಯಾಣ ಸಂಘಗಳೂ (ಖWಂs) ಈ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.


ತ್ಯಾಜ್ಯವನ್ನು ಸಾಧ್ಯವಾದಷ್ಟು ತಮ್ಮ ಆವರಣದಲ್ಲೇ ಸಂಸ್ಕರಿಸಿ ಸಂಪನ್ಮೂಲವಾಗಿ ಬಳಸಿಕೊಳ್ಳಬೇಕು. ಅದು ಸಾಧ್ಯವಾಗದಿದ್ದರೆ ಪಾಲಿಕೆ ಮಾನ್ಯತೆ ನೀಡಿರುವ ಅಧಿಕೃತ ಸಂಸ್ಥೆಗಳಿಗೆ ಮಾತ್ರ ನೀಡಬೇಕು. ಅನಧಿಕೃತ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ತ್ಯಾಜ್ಯ ನೀಡಬಾರದು ಎಂದು ಹೇಳಿದರು.


೨೦೨೬ರ ಏಪ್ರಿಲ್ ೧ರಿಂದ ಜಾರಿಗೆ ಬಂದಿರುವ ಹೊಸ ಘನ ತ್ಯಾಜ್ಯ ನಿರ್ವಹಣಾ ನಿಯಮಗಳಂತೆ ಬೃಹತ್ ತ್ಯಾಜ್ಯ ಉತ್ಪಾದಕರು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಃSWಒಐ) ಸಿಒಒ ರಮಾಮಣಿ ತಿಳಿಸಿದರು.


ತ್ಯಾಜ್ಯವನ್ನು ಹಸಿ, ಒಣ, ಸ್ಯಾನಿಟರಿ ಹಾಗೂ ವಿಶೇಷ ಕಾಳಜಿ ತ್ಯಾಜ್ಯ ಎಂಬ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ನೀಡಬೇಕು. ಮಿಶ್ರ ಕಸ ನೀಡುವುದು, ಕಸ ಉರಿಸುವುದು ಅಥವಾ ತೆರೆದ ಜಾಗ, ಚರಂಡಿ ಹಾಗೂ ಜಲಮೂಲಗಳಲ್ಲಿ ಸುರಿಯುವುದು ಸಂಪೂರ್ಣ ನಿಷೇಧ ಎಂದು ಹೇಳಿದರು.


ಇದೇ ವೇಳೆ, ಪಾಲಿಕೆಯ ಲಾರಿ ಪಾಯಿಂಟ್‌ಗಳನ್ನು ಹಂತ ಹಂತವಾಗಿ ಟ್ರಾನ್ಸ್‌ಫರ್ ಸ್ಟೇಷನ್‌ಗಳಾಗಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಕಸ ಸಾಗಾಟದ ವೇಳೆ ರಸ್ತೆಯಲ್ಲಿ ತ್ಯಾಜ್ಯ ನೀರು ಸೋರಿಕೆಯಾಗುವುದನ್ನು ತಡೆಯಲು ಸಾಧ್ಯವಾಗಲಿದೆ ಎಂದು ಆಯುಕ್ತರು ತಿಳಿಸಿದರು.