
ಕಲಬುರಗಿ: ನಗರದ ನೆಹರುಗಂಜ್‍ನಲ್ಲಿರುವ ಗುಲಬರ್ಗ ದಾಲ್ ಮಿಲ್ಲರ್ಸ್ ಅಸೋಶಿಯೇಷನ್ ಎಸ್.ಬಿ ಪಾಟೀಲ ಸಭಾಂಗಣದಲ್ಲಿಂದು ಆಯೋಜಿಸಲಾದ ಆಮದುರಫ್ತು ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಉತ್ತರ ಮತಕ್ಷೇತ್ರದ ಶಾಸಕರಾದ ಕನೀಜ್ ಫಾತಿಮಾ ಅವರು ಉದ್ಘಾಟಿಸಿದರು.ಎಂಎಲ್‍ಸಿ ಡಾ.ಬಿ.ಜಿ ಪಾಟೀಲ,ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ,ಆಹಾರಧಾನ್ಯ ಬೀಜ ವರ್ತಕರ ಸಂಘದ ಅಧ್ಯಕ್ಷ ಸಂತೋಷ ಲಂಗರ್,ಕೆಪಿಸಿಸಿ ಸದಸ್ಯ ಫರಾಜ್ ಉಲ್ ಇಸ್ಲಾಂ , ಪುಣೆಯ ಅಸ್ಥಂ ಟ್ರೇಡಿಂಗ್ ಸಂಸ್ಥಾಪಕ ರಮೇಶ ಕಡಗಂಚಿ ,ಪೂಜಾ ಅವರು ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.





























