Home ಜಿಲ್ಲೆ ಕಲಬುರಗಿ ರಕ್ತದಲ್ಲಿ ಮೂಡಿದ ಅಭಿಮಾನ: ಮುಖ್ಯಮಂತ್ರಿ ಅವರ ಭಾವಚಿತ್ರಕ್ಕೆ ವಿಶಿಷ್ಟ ಗೌರವ

ರಕ್ತದಲ್ಲಿ ಮೂಡಿದ ಅಭಿಮಾನ: ಮುಖ್ಯಮಂತ್ರಿ ಅವರ ಭಾವಚಿತ್ರಕ್ಕೆ ವಿಶಿಷ್ಟ ಗೌರವ

ಕಲಬುರಗಿ,ಜು 12 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಿಂಗೆ ಅವರ ಅಭಿಮಾನ ಮತ್ತು ಗೌರವಕ್ಕೆ ವಿಶಿಷ್ಟ ರೂಪ ದೊರೆತಿದೆ. ಅವರ ರಕ್ತವನ್ನು ಬಳಸಿ ಗೌರವಾನ್ವಿತ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಭಾವಚಿತ್ರವನ್ನು ಕಲಾತ್ಮಕವಾಗಿ ರಚಿಸಿದ್ದಾರೆ.
ಈ ಅಪರೂಪದ ಕಲಾಕೃತಿಯು ಮುಖ್ಯಮಂತ್ರಿಗಳ ಮೇಲಿನ ಮಲ್ಲಿಕಾರ್ಜುನ ಸಿಂಗೆ ಅವರ ಗೌರವ, ವಿಶ್ವಾಸ ಮತ್ತು ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿಸುತ್ತದೆ. ತಮ್ಮ ರಕ್ತವನ್ನೇ ಮಾಧ್ಯಮವನ್ನಾಗಿ ಬಳಸಿಕೊಂಡು ಭಾವಚಿತ್ರ ರಚಿಸಲು ಅವಕಾಶ ನೀಡಿರುವುದು ಅವರ ವಿಶಿಷ್ಟ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಈ ಕಲಾಕೃತಿಯನ್ನು ವೀಕ್ಷಿಸಿದ ಸಾರ್ವಜನಿಕರು ಹಾಗೂ ಕಲಾಭಿಮಾನಿಗಳು ಕಲಾವಿದರ ಪ್ರತಿಭೆ ಮತ್ತು ಮಲ್ಲಿಕಾರ್ಜುನ ಸಿಂಗೆ ಅವರ ವಿಶಿಷ್ಟ ಕಲಾಪ್ರೇಮವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲೆಯ ಮೂಲಕ ವ್ಯಕ್ತವಾಗುವ ಇಂತಹ ಗೌರವದ ಅಭಿವ್ಯಕ್ತಿಗಳು ಸಮಾಜದಲ್ಲಿ ಸೃಜನಶೀಲತೆಗೆ ಹೊಸ ಆಯಾಮವನ್ನು ನೀಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಲ್ಲಿಕಾರ್ಜುನ ಸಿಂಗೆ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಸಾರ್ವಜನಿಕ ಸೇವೆ ಹಾಗೂ ಸಾಮಾಜಿಕ ಕಾಳಜಿಯಿಂದ ಗುರುತಿಸಿಕೊಂಡಿದ್ದಾರೆ. ಅವರ ಈ ವಿಶಿಷ್ಟ ಪ್ರಯತ್ನವು ಸಾರ್ವಜನಿಕ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ಕಲೆಯ ಮೂಲಕ ಗೌರವ ಸಲ್ಲಿಸುವ ಒಂದು ಅಪರೂಪದ ಉದಾಹರಣೆಯಾಗಿ ಗಮನ ಸೆಳೆದಿದೆ.