
ಕಲಬುರಗಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ ಮತ್ತು ಅಕ್ಷರ ದಾಸೋಹ ನೌಕರ ಸಂಘಗಳ ಜಿಲ್ಲಾ ಘಟಕಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಂಘಗಳ ಪ್ರಮುಖರಾದ ಶಾಂತಾ ಘಂಟೆ,ರಾಜಮತಿ ಪಾಟೀಲ,ಮಹಾದೇವಿ ಪೋಲಕಪಳ್ಳಿ,ವಿಜಯಲಕ್ಷ್ಮೀ ಹಿರೇಮಠ,ಸಂಗೀತಾ ಗುತ್ತೇದಾರ,ರೇಖಾ ರಂಗನ್ ಅವರು ಸೇರಿದಂತೆ ಹಲವರು ಪಾಲ್ಗೊಂಡರು.





























