
ಸೇಡಂ,ಜು.12 ತಾಲೂಕಿನಲ್ಲಿ ತಿಂಗಳಿಂದ ಮಳೆ ಸಮರ್ಪಕವಾಗಿ ಬರುತ್ತಿಲ್ಲ. ಹೀಗಾಗಿ ತಾಲೂಕಿನ ಬಿಬ್ಬಳ್ಳಿ ಗ್ರಾಮದ ಬಳಿಯ ಕಾಗಿಣಾ ನದಿ ಸಂಪೂರ್ಣ ಬತ್ತಿ ಹೋಗಿದೆ.ನೀರು ಪೂರೈಕೆ ಮಾಡುವ ಆರೋ ಪ್ಲಾಂಟ್ ಕೆಟ್ಟು ಹೋಗಿ ಒಂದು ತಿಂಗಳಾದರೂ ಇನ್ನೂ ಕೂಡ ರಿಪೇರಿ ಮಾಡಿಲ್ಲ.
ನದಿಯಲ್ಲಿ ಅಲ್ಪ ಸ್ವಲ್ಪ ನೀರು ಇದ್ದು ಗ್ರಾಮಕ್ಕೆ ಪೂರೈಕೆ ಆಗುತ್ತಿಲ್ಲ. ಗ್ರಾಮದಲ್ಲಿ ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿದೆ.ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರ ಹೋಗಿ ಗ್ರಾಮಸ್ಥರು ನೀರು ತರುವ ಪರಿಸ್ಥಿತಿ ಉಂಡಾಗಿದೆ.ಗ್ರಾಮಸ್ಥರು ತರುವ ನೀರು ಕೂಡ ಗಲಿಜು ಬರುತ್ತಿದೆ.
ಆರೋ ಪ್ಲಾಂಟ್ ರಿಪೇರಿ ಅಡಿ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಗ್ರಾಮದ ಸಿದ್ದು ಬಿಬ್ಬಳ್ಳಿ ಒತ್ತಾಯ ಮಾಡಿದ್ದಾರೆ.





























