Home ಜಿಲ್ಲೆ ಸನ್ಮಾನ ಕಾರ್ಯಕ್ರಮ

ಸನ್ಮಾನ ಕಾರ್ಯಕ್ರಮ

ಲಕ್ಷೆ÷್ಮÃಶ್ವರ,ಆ೧೧: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ವತಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಲೋಕಾಯುಕ್ತ ಎಸ್ ಪಿ ಎಸ್ ಎಂ ರಾಗಿಯವರು ಮಾತನಾಡಿ ಶಿಕ್ಷಕರು ಓರ್ವ ಸಮಾಜ ಸುಧಾರಕರು ಮತ್ತು ದೇಶ ನಿರ್ಮಾಪಕರು ಅವರ ಬೋಧನೆಗಳು ನಮ್ಮನ್ನು ಇಂದು ಈ ಮಟ್ಟಕ್ಕೆ ಬೆಳೆಸಿವೆ.


ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ನಾಗರಿಕರಾಗಿ ಈಶ ಮತ್ತು ಸಮಾಜ ಸುಧಾರಣೆಗೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ಪಿ ಬಳೆಗಾರ, ತಾಲೂಕ ಪಂಚಾಯತಿ ಮಾಜಿ ಸದಸ್ಯ ರಾಜರತ್ನ ಹುಲಗೂರ, ಸೋಮಣ್ಣ ಡಾಣಗಲ್ಲ, ಅಶೋಕ್ ಶಿರಹಟ್ಟಿ, ಭೈರಪ್ಪ ಕೋಪರಡೆ, ಶಿವಪ್ಪ ಕುರಿ, ವೀರಣ್ಣ ಅಕ್ಕೂರು, ಪ್ರವೀಣ್ ಹುಲಗೂರ, ಈರಣ್ಣ ಅಳ್ಳಳ್ಳಿ ಇದ್ದರು. ಮಂಜುನಾಥ್ ಶಂಭೋಜಿ ನಿರ್ವಹಿಸಿದರು.