Home ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿನ ಇವರ ಸೇವೆ ಅಮೋಘ:ಸಜ್ಜನಶೆಟ್ಟಿ

ಶಿಕ್ಷಣ ಕ್ಷೇತ್ರದಲ್ಲಿನ ಇವರ ಸೇವೆ ಅಮೋಘ:ಸಜ್ಜನಶೆಟ್ಟಿ

ಸೈದಾಪುರ:ಜು.೨:ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಮೂಲಕ ವಿವಿಧ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಹಿಸಿದ ರಘುನಾಥರೆಡ್ಡಿ ಅವರ ಸೇವೆ ಅಮೋಘವಾದದು ಎಂದು ವಿದ್ಯಾ ವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳಿಂದ ಯಾದಗಿರಿ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತçದ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ರಘುನಾಥರೆಡ್ಡಿ ಅವರನ್ನು ಸೈದಾಪುರ ಶ್ರೀ ಬಾಲಾಜಿ ಶಿಕ್ಷಣ ಸಂಸ್ಥೆಯಲ್ಲಿ ಸನ್ಮಾನಿಸಿ ಮಾತನಾಡಿದರು. ಸೇವಾ ಅವಧಿಯಲ್ಲಿನ ಅವರು ವಿದ್ಯಾರ್ಥಿಗಳಿಗೆ ತೋರಿದ ಕಾಳಜಿ ಇತರರಿಗೆ ಮಾದರಿಯಾಗಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸನ್ಮಾನಿತರಾಗಿ ರಘುನಾಥರೆಡ್ಡಿ ಮಾತನಾಡಿ, ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ. ನಿವೃತ್ತಿಯ ಸಂದರ್ಭದಲ್ಲಿ ನನ್ನನ್ನು ಸನ್ಮಾನಿಸಿ ಗೌರವಿಸಿರುವುದು ನಿಮ್ಮಲ್ಲಿನ ಶೈಕ್ಷಣಿಕ ಮಹತ್ವ ತಿಳಿಸುವಂತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಕಿಶನ ರಾಠೋಡ, ಮಹಾದೇವಪ್ಪ ದದ್ದಲ, ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಳ, ಉಪನ್ಯಾಸಕರಾದ ದೇವಿಂದ್ರ ಪೀರಾ, ರಾಜಶೇಖರ ಪಾಟೀಲ, ಹಣಮರೆಡ್ಡಿ ಮೋಟ್ನಳ್ಳಿ, ಆನಂದ ಪಾಟೀಲ, ಶ್ವೇತಾ ರಾಘವೇಂದ್ರ ಪೂರಿ, ಮೀನಾಕ್ಷಿ, ಚಾಂದ ಸೇರಿದಂತೆ ಇತರರಿದ್ದರು.