
ಬೀದರ:ಪರಿಸರ ಹಾಳಾದರೆ ನಮಗಿನ್ನು ಉಳಿಗಾಲವಿಲ್ಲ. ದಿನೇ ದಿನೇ ವಾತಾವರಣದಲ್ಲಿ ಶಾಖ ಹೆಚ್ಚಾಗಿ ನೀರಿನ ಬವಣೆ ಅನುಭವಿಸ ಬೇಕಾಗುತ್ತಿದೆ. ಜಲ ಸಂರಕ್ಷಣಾ ಜಾಗೃತಿ ಅನಿವಾರ್ಯ ಎಂದು ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಮತಿ ವೀಣಾ ನಿರಂಜನ ನುಡಿದರು.
ವಚನ ಚಾರಿಟೇಬಲ್ ಸೊಸೈಟಿ ಹಾಗೂ ಕೃಷಿ ತಂತ್ರಜ್ಞನರ ಸಂಸ್ಥೆ ಸಹಯೋಗದೊಂದಿಗೆ ಬೀದರಿನ ಪೆÇೀಲಾ ಕನ್ವೆನ್ಶನ್ ಹಾಲ್ ನಲ್ಲಿ ಇತ್ತೀಚಿಗೆ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ್ ಮಟ್ಟ ಹೆಚ್ಚಿಸುವ ಕುರಿತು ಉಪನ್ಯಾಸವನ್ನು ಸಸಿಗೆ ನೀರೆರೆದು ಶ್ರೀ ಮತಿ ವೀಣಾ ನಿರಂಜನ ಮಾತಾಡುತ್ತ.. ನಮ್ಮಲ್ಲಿ ನೀರಿನ ಬಗ್ಗೆ ಕಾಳಜಿ ಇಲ್ಲ, ಆಹಾರ ಎಲ್ಲಿಂದದಾರೂ ತರಬಹುದು, ಆದರೆ ನೀರು ತರುವುದು ಕಷ್ಟ. ನೀರಿಲ್ಲದ ಜೀವನ ಬರಡು. ನಾವು ದಿನಾಲು ನೀರು ಬಳಸುವ ಪದ್ಧತಿ ಇನ್ನಾದರೂ ಬದಲಿಸಿ ಕೊಳ್ಳಲೆ ಬೇಕು. ನೀರು ಪೆÇೀಲಾಗುವುದು ತಡೆದರೆ ನೀರು ಸಂಗ್ರಹಿಸಿದಂತಾಗುತ್ತದೆ.
ಇಂದು ವಚನ ಚಾರಿಟೇಬಲ್ ಸೊಸೈಟಿ ಅವರು ಜಿಲ್ಲೆಯ ರೈತರಿಗೆ, ಪಿಡಿಓರಿಗೆ, ಸ್ಯಾನಿಟರ್ ಇನ್ಸ್ ಪೆಕ್ಟರಿಗೆ ಒಂದೆಡೆ ಸೇರಿಸಿ ಕೊಡುವ ಸದರಿ ತರಬೇತಿ ತುಂಬಾ ಉಪಯುಕ್ತ ಹಾಗೂ ಸಾಮಾಜಿಕ ಜವಾಬ್ದಾರಿ ಹೊಂದಿದೆ ಎಂದು ನುಡಿದರು. ಮುಖ್ಯ ಅತಿಥಿಗಳಾದ ಪಿ ಡಿ ಓ ಸಂಘದ ಅಧ್ಯಕ್ಷರಾದ ಸಂತೋಷ ಪಾಟೀಲ, ಕ.ರಾ.ಸ.ನೌ.ಸಂಘದ ಕೋಶಾಧ್ಯಕ್ಷರಾದ ದೇವಪ್ಪ ತಮ್ಮದಿನ ನಿತ್ಯ ಹಳ್ಳಿಗಳ ಜೀವನದ ಆಗು ಹೋಗುಗಳ ಜೊತೆಗೆ ನೀರಿನ ಸಂಕಷ್ಟ, ನೀರು ಶೇಖರಣೆ ಮಾಡುವುದು ಇಂದು ತುಂಬಾ ಅನಿವಾರ್ಯ ಎಂಬ ಮಾತಿನಿಂದಲೆ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಾ ಶಿವಶಂಕರ ಟೋಕರೆ ವಹಿಸಿದರೆ ಡಾ ರವಿ ದೇಶಮುಖ ಪ್ರಾಸ್ತಾವಿಕವಾಗಿ ಮಾತನಾಡಿದರೆ ಡಾ ಸಿ ಆರ್ ಕೊಂಡಾ ಸ್ವಾಗತಿಸಿದರು. ಡಾ ನಿಂಗದಳ್ಳಿ ಮಲ್ಲಿಕಾರ್ಜುನ ನಿರೂಪಣೆ ಮಾಡಿದರೆ ಡಾ ಸುರೇಶ ಪಾಟೀಲ ವಂದಿಸಿದರು. ಆಂಧ್ರಪ್ರದೇಶದ ನಿವೃತ್ತ ಕೃಷಿ ವಿಜ್ಞಾನಿಗಳು ಇಕ್ರಿಸ್ಯಾಟ್ ಸಂಸ್ಥೆಯ ಮುಖ್ಯಸ್ಥರಾದ ಡಾ ಮುರಳಿ ಶರ್ಮಾ ವಿಶೇಷ ಉಪನ್ಯಾಸ ಮಂಡಿಸುತ್ತ.. ಇಂದು ಹಳ್ಳಿ, ನಗರ, ಪಟ್ಟಣ ಎಂಬ ಭೇದ ಮಾಡದೆ ಎಲ್ಲರೂ ಮಾನಸಿಕವಾಗಿ ನೀರಿನ ಬಗ್ಗೆ ಜನ ಜಾಗೃತಿ ಮಾಡಲೇ ಬೇಕು. ಸ್ವಲ್ಪಮಟ್ಟಿಗೆ ನಿರ್ಲಕ್ಷ ವಹಿಸಿದರೆ ವ್ಯತಿರಿಕ್ತವಾದ ಪರಿಣಾಮ ನಾವೇಅನುಭವಿಸಬೇಕಾಗುತ್ತದೆಮೊದಲು ನೀರು ಪೆÇೀಲಾಗುವುದು ಸಾಮಾನ್ಯವಾಗಿ ತಡೆಗಟ್ಟ ಬೇಕು. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.
ನಮ್ಮ ಮಾಳಿಗೆಯ ನೀರು ನಾವೇ ಶೇಖರಿಸಿ ಕೊಂಡರೆ ಅನಾಹುತ ತಪ್ಪಿಸಿ ಕೊಳ್ಳಬಹುದಾಗಿದೆ. ಮಳೆ ನೀರು ಗಂಗಾ ನದಿ ನೀರಿಗಿಂತ ಶುದ್ಧ, ಪವಿತ್ರ, ಆದರೆ ಅದಕ್ಕೆ ನಾವು ಬೆಲೆ ಕೊಡುತ್ತಿಲ್ಲ, ಯಾವುದೇ ನೀರು ಮಣ್ಣಿನಲ್ಲಿ ಹೋಗಿ ಇಂಗಿದರೆ ನಮ್ಮ ಅಂತರ್ ಜಲ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ಮನೆ ಕಟ್ಟುವ ವೇಳೆ ಮೊದಲು ಮಳೆ ನೀರು ಶೇಖರಣೆ ಗಾಗಿ ಟ್ಯಾಂಕ್ ನಿರ್ಮಿಸಿ ಅದರಲ್ಲಿ ನೀರು ಸಂಗ್ರಹಣೆ ಮಾಡಿ ಕೊಂಡರೆ ಅನ್ಯರಿಗೆ ನೀರು ಕೊಡಿ ಎಂದು ಗೋಗರೆಯುವ ಪ್ರಮೇಯೆ ಉದ್ಭವಿಸುವುದಿಲ್ಲ. ಪ್ರಾಯೋಗಿಕ ವಾಗಿ ನೀರು ಬಳಸುವ, ಶೇಖರಣೆ ಮಾಡುವ ವಿವಿಧ ವಿಧಾನಗಳನ್ನು ಮನ ಮುಟ್ಟುವಂತೆ ಸುಮಾರು ಒಂದುವರೆ ಗಂಟೆಗಳ ಕಾಲ
ತಿಳಿಸಿದರು.ಸುಮಾರು ಒಂದು ನೂರು ಜನರು ಭಾಗವಹಿಸಿ ಇದರ ಲಾಭ ಪಡೆದರು…….. ವೇದಿಕೆ ಮೇಲೆ ಅಲ್ಲಮಪ್ರಭು ನಾವದಗೇರೆ, ಶಿವಕುಮಾರ ಸಾಲಿ, ಸಂಗಾರೆಡ್ಡಿ ಕೊತ್ತಾ ಉಪಸ್ಥಿತರಿದ್ದರು.































