
ಕಲಬುರಗಿ,ಜೂ.26-ವಾಟರ್ ಎಡ್ ಸಂಸ್ಥೆಯ ವತಿಯಿಂದ ಕಲಬುರ್ಗಿ ಮತ್ತು ಆಳಂದ ತಾಲೂಕಿನ ಆಯ್ದ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೃತ ವರ್ಷಿಣಿ ಯೋಜನೆಯ “ಕಾಮಗಾರಿ ರಚನೆಗಳ ಹಸ್ತಾಂತರ ಕಾರ್ಯಕ್ರಮ” ಗುರುವಾರ ತಾಲೂಕ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಎಂ.ಕಟ್ಟಿಮನಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಳಂದ ತಾಲ್ಲೂಕ ಪಂಚಾಯತಿಯ ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ ಅವರು ಮಾತನಾಡಿ, ವಾಟರ್ ಎಡ್ ಸಂಸ್ಥೆಯ ಅನೇಕ ಕಾಮಗಾರಿಗಳು ಹಾಗೂ ಜನರಲ್ಲಿ ನೀರಿನ ಮಹತ್ವ ಕುರಿತು ಅರಿವು ಕಾರ್ಯಕ್ರಮಗಳನ್ನು ಮಾಡಿರುತ್ತಾರೆ ಅವರು ಕೈ ಗೊಂಡ ಕಾಮಗಾರಿಗಳನ್ನು ಸಂರಕ್ಷೆಣೆಯನ್ನು ಮಾಡುವುದು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ಆಗಬೇಕು ಎಂದರು.
ಅತಿಥಿಗಳಾಗಿ ಕಲಬುರಗಿ ತಾಲ್ಲೂಕ ಪಂಚಾಯತಿ ತಾಲೂಕ ಯೋಜನಾ ಅಧಿಕಾರಿ ಜಯಶ್ರೀ ಬಿ.ಕರ್ಜಗಿ, ವಾಟರ್ ಎಡ್ ಸಂಸ್ಥೆಯ ರಾಯಚೂರು ಜಿಲ್ಲಾ ಸಂಯೋಜಕರು ವಹಿಸಿ ಮಾತನಾಡಿ, ಸಂಸ್ಥೆಯು 2023ರಿಂದ 2026 ವರಿಗೆ ಮೂರು ವರ್ಷಗಳಿಂದ ನಿರಂತರವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಅನೇಕ ಕಾಮಗಾರಿಗಳು (ರಚನೆಗಳು) ಮಾಡಿರುತ್ತೇವೆ ಹಾಗೂ ಜನರಲ್ಲಿ ನೀರಿನ ಮಹತ್ವ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಬಗ್ಗೆ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಜಾಗೃತಿ ಅರಿವು ಮತ್ತು ಇನ್ನಿತರ ಚಟುವಟಿಕೆಗಳು ಸಭೆ ಕಾರ್ಯಕ್ರಮ ಮಾಡಿರುತ್ತೇವೆ. ಈಗ ನಮ್ಮ ಯೋಜನೆಯ ಕೊನೆಯ ಹಂತ ವಾಗಿರುವುದರಿಂದ ಇಂದು ಈ ಕಾರ್ಯಕ್ರಮದ ಮೂಲಕ ಎಲ್ಲಾ ಕಾಮಗಾರಿ ರಚನೆಗಳನ್ನು ತಮ್ಮಗೆ ಹಸ್ತಾಂತರ ಮಾಡುತ್ತಿದ್ದೇವೆ. ಇವುಗಳ ಸಂರಕ್ಷಣೆ ಹಾಗೂ ಸಣ್ಣ ಪುಟ್ಟ ದುರಸ್ತಿಗಳನ್ನು ತಮ್ಮ ಗ್ರಾಮ ಪಂಚಾಯತ್ ಯಿಂದ ಮಾಡಿ ಮತ್ತು ಸಮುದಾಯದಲ್ಲಿ ಜನರಿಗೆ ಕೆರೆ, ಇಂಗು ಗುಂಡಿ, ಚೆಕ್ ಡ್ಯಾಂ, ಮಳೆ ನೀರು ಕೊಯ್ಲುಗಳಂತ ಅನೇಕ ಕಾಮಗಾರಿಗಳು ಮಾಡಿ ಹರಿದು ಹೋಗುವ ಮಳೆ ನೀರು ನಿಲ್ಲಿಸಿ ಭೂಮಿಗೆ ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಬಗ್ಗೆ ಮಾಹಿತಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು. ನಂತರ ಸಂಸ್ಥೆಯ ವತಿಯಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸನ್ಮಾನ ಹಾಗೂ ನೀರಿನ ಪರಿಕ್ಷೆ ದಾಖಲೆ ಪುಸ್ತಕ ಹಾಗೂ ಕಾಮಗಾರಿಗಳು ಮಾಡಿದ ಪುಸ್ತಕ ಹಸ್ತಾಂತರ ಮಾಡಲಾಯಿತು.
ಕಲಬುರಗಿ ಮತ್ತು ಆಳಂದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‍ಗಳಿಗೆ ನೀರಿನ ಪರಿಕ್ಷೆ ದಾಖಲೆ ಪುಸ್ತಕ ನೀಡಲಾಯಿತು. ನಂತರ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕಾರ್ಯದರ್ಶಿಗಳು, ತಾಂತ್ರಿಕ ಸಿಬ್ಬಂದಿಗಳು, ಪಂಪ್ ಆಪರೇಟರ್‍ಗಳು ಎಂ.ಬಿ.ಕೆ. ಸಿಬ್ಬಂದಿಗಳು ಈ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿದರು. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ ಸ್ವಾಗತಿಸಿದರು. ಭೀಮರಾವ ಭಾರತಿ ವಂದಿಸಿದರು. ಶಿವಲೀಲಾ ಅವರನ್ನು ಸನ್ನಾನಿಸಲಾಯಿತು. ಶೋಭಾ,ಶಶಿಕಲಾ ಉಪಸ್ಥಿತರಿದ್ದರು.





















