Home ಜಿಲ್ಲೆ ಶಹಾಪೂರದಲ್ಲಿ ಬಿಜೆಪಿ ಸಂಘಟನಾ ಸಭೆ; ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ

ಶಹಾಪೂರದಲ್ಲಿ ಬಿಜೆಪಿ ಸಂಘಟನಾ ಸಭೆ; ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ

ಯಾದಗಿರಿ:ಜು.೧೫: ಜಿಲ್ಲೆಯ ಶಹಾಪೂರ ನಗರದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಸದ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಬಿಜೆಪಿ ಸಂಘಟನಾತ್ಮಕ ವಿಶೇಷ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ವೆಂಕಟರೆಡ್ಡಿ ಮುದ್ನಾಳ ಅವರ ಮುಂದಾಳತ್ವದಲ್ಲಿ ನಾಗರಾಜಗೌಡ ಮಾನಸಗಲ್, ಕಿಟ್ಟು ನಾಯಕ್, ನರಸಪ್ಪ ನಾಯಕ್, ದೇವು ನಾಯಕ್ (ವಡ್ನಳ್ಳಿ), ವಿಶ್ವನಾಥ, ಶಿವಕುಮಾರ್ (ಬಂದಹಳ್ಳಿ), ಮಹೇಶ್, ಅಂಬರೀಶ, ಮಲ್ಲಯ್ಯ (ಯಾದಗಿರಿ), ಮರೆಪ್ಪ (ಇಬ್ರಾಹಿಂಪುರ), ನಾರಾಯಣ ನಾಯಕ, ದೇವು ನಾಯಕ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಯಾದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ರಾಜ್ಯ ನಾಯಕರು ಪಿ. ರಾಜೀವ್, ಶರಣು ತಳ್ಳಿಕೇರಿ, ರಾಜುಗೌಡ, ಶಶೀಲ್ ನಮೋಶಿ, ಅಮರನಾಥ್ ಪಾಟೀಲ, ಅರುಣ ಶಹಾಪೂರ, ಶರಣಪ್ಪ ತಳವಾರ, ಲಲಿತಾ ಅನಪೂರ, ಸಿದ್ದಣಗೌಡ ವಡಗೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರುಕುಂದಿ, ಉಪಾಧ್ಯಕ್ಷ ಬಸವರಾಜ ಸೊನ್ನದ, ಪ್ರಭಾವತಿ ಮಾರುತಿ ಕಲಾಲ್, ಸುನೀತಾ ಚವ್ಹಾಣ್, ಲಿಂಗಪ್ಪ ಹತ್ತಿಮನಿ, ರಾಜಶೇಖರ ವಡಗೇರಾ, ರಮೇಶ್ ದೊಡ್ಡಮನಿ, ಸುಭಾಷ್ ನಾಯಕ್, ಮಾರುತಿ ಕಲಾಲ್, ಸ್ವಾಮಿದೇವ ದಾಸನಕೇರಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.