Home ಜಿಲ್ಲೆ ಗುರುವಂದನಾ ಸಮಾರಂಭ

ಗುರುವಂದನಾ ಸಮಾರಂಭ

ನವಲಗುAದ,ಜು೮ : ಸಮಾಜದಲ್ಲಿ ಸಂಸ್ಕಾರವAತರಾಗಿ ಜೀವನ ಸಾಗಿಬೇಕು ಎಂದು ಅಣ್ಣಿಗೇರಿ ತಾಲ್ಲೂಕು ಇಬ್ರಾಹಿಂಪುರ ಗ್ರಾಮದ ಸರಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಯ್ಯ ಹಿರೇಮಠ ಕರೆ ನೀಡಿದರು.

ಹಾಲಕುಸುಗಲ್ಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೯೯೯ – ೨೦೦೦ ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ, ನಿವೃತ್ತಿ ಶಿಕ್ಷಕರ ಅಭಿನಂದನಾ ಮತ್ತು ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಧಾರವಾಡ ತಾಲ್ಲೂಕು ಮುತ್ತಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಮಾತೆ ಆರ್ ಎಂ ಮತ್ತೆಸಾಬನವರ ಮಾತನಾಡಿ ನಿಮ್ಮ-ನಿಮ್ಮ ಮಕ್ಕಳಿಗೆ ಮಾದರಿ ತಂದೆ-ತಾಯAದಿರಾಗಿ ಬಾಳಬೇಕೆಂದು ಕಿವಿಮಾತು ಹೇಳಿದರು.

ಎಂಎಲ್ ಪೂಜಾರ, ವ್ಹಿ ಎನ್ ಜಮಖಂಡಿ, ಎಂ ಬಿ ಅಣ್ಣಿಗೇರಿ, ಎಂ ಎಲ್ ಪೂಜಾರ, ಎಸ್ ಎಚ್ ತೆಗ್ಗಿನಕೇರಿ, ಆರ್ ಎಂ ಮತ್ತೆಸಾಬನವರ, ಸಿದ್ದಯ್ಯ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುಜಾತಾ ಪಾಟೀಲ, ಗೀತಾ ನಿಡವಣಿ, ಸವಿತಾ ನಿಡವಣಿ, ಫಕ್ಕೀರವ್ವ ಮಡಿವಾಳರ. ದ್ಯಾಮವ್ವ ಕುಸುಗಲ್ಲ, ಖಾಜಾಬಿ ಮೋಖಾಶಿ, ಯಲ್ಲವ್ವ ಸಿದ್ದಾಪೂರ, ಮಹೇಶ ಮಡಿವಾಳರ, ಮಂಜು ಕಳ್ಳಿಗುಡ್ಡ ಶಿವಾನಂದ ಕಂಬಳಿ ಇತರರು ಇದ್ದರು.