
ಬೀದರ್, ಸೆ 15: ಬೀದರ್ ವಿಶ್ವವಿದ್ಯಾಲಯದ ಪ್ರಥಮ ವಾರ್ಷಿಕ ಘಟಿಕೋತ್ಸವದಲ್ಲಿ ಗುರು ನಾನಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 14 ವಿಶ್ವವಿದ್ಯಾಲಯ ರ್ಯಾಂಕ್‍ಗಳನ್ನು ಪಡೆಯುವ ಮೂಲಕ ಕಾಲೇಜಿಗÉ ಹಾಗೂ ಜಿಲ್ಲÉಗÉ ಕೀರ್ತಿ ತಂದಿದ್ದಾರÉ.
ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೆಪ್ಟೆಂಬರ್ 12, 2026ರಂದು ನಡೆದ ಘಟಿಕೋತ್ಸವವು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ಬೀದರ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಶ್ರೀ ಥಾವರ್‍ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಡಾ. ಕೃಷ್ಣ ಎಸ್. ದೀಕ್ಷಿತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೀದರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಬಿ.ಎಸ್. ಬಿರಾದಾರ ಹಾಗೂ ಕುಲಸಚಿವರು (ಆಡಳಿತ ಮತ್ತು ಮೌಲ್ಯಮಾಪನ) ಡಾ. ಪರಮೇಶ್ವರ ನಾಯಕ್ ಟಿ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
2026ರ ರ್ಯಾಂಕ್ ವಿಜೇತ ವಿದ್ಯಾರ್ಥಿಗಳು:
ರಸಾಯನಶಾಸ್ತ್ರ ವಿಭಾಗ : ಸೈಯದಾ ಮಾರಿಯಾ ಫಾತಿಮಾ 1ನೇ ರ್ಯಾಂಕ್, ಆಫ್‍ರೀನ್ ಬೇಗಂ 3ನೇ ರ್ಯಾಂಕ್, ಅಂಬಿಕಾ 3ನೇ ರ್ಯಾಂಕ್, ದೀಪಿಕಾ ರÉಡ್ಡಿ 4ನೇ ರ್ಯಾಂಕ್, ಶಗುಫ್‍ತಾ ತಝೀನ್ 5ನೇ ರ್ಯಾಂಕ್.
ಗಣಿತಶಾಸ್ತ್ರ ವಿಭಾಗ : ಮೇಹ್‍ರೀನ ಅಮೀನ್ 1ನೇ ರ್ಯಾಂಕ್, ಪ್ರಿಯಾಂಕಾ 4ನೇ ರ್ಯಾಂಕ್, ನಿಖಿತಾ 5ನೇ ರ್ಯಾಂಕ್.
ವಾಣಿಜ್ಯಶಾಸ್ತ್ರ ವಿಭಾಗ : ಮೊಹಮ್ಮದ್ ಮುಝಮಿಲ್ – 1ನೇ ರ್ಯಾಂಕ್, ಭವಾನಿ ಎಂ. 3ನೇ ರ್ಯಾಂಕ್.
ಸಸ್ಯಶಾಸ್ತ್ರ ವಿಭಾಗ : ಸಾಕ್ಷಿ 3ನೇ ರ್ಯಾಂಕ್, ವೈಷ್ಣವಿ ಸ್ವಾಮಿ 4ನೇ ರ್ಯಾಂಕ್, ಸೌಂದರ್ಯ 5ನೇ ರ್ಯಾಂಕ್.
ಭೌತಶಾಸ್ತ್ರ ವಿಭಾಗ : ಪೂಜಾ ಧರ್ಮಗೊಂಡ 3ನೇ ರ್ಯಾಂಕ್.
ವಿದ್ಯಾರ್ಥಿಗಳ ಈ ಮಹತ್ತರ ಸಾಧನೆಗÉ ಶ್ರೀ ನಾನಕ್ ಝಿರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷ ಡಾ. ಎಸ್. ಬಲಬೀರ ಸಿಂಗ್, ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್, ಪ್ರಾಂಶುಪಾಲೆ ಡಾ. ಶಾಮಲಾ ವಿ. ದತ್ತಾ ಹಾಗೂ ಉಪನ್ಯಾಸಕ ವೃಂದದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರÉ.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿದ ಆಡಳಿತ ಮಂಡಳಿ ಹಾಗೂ ಬೋಧಕ ವೃಂದವು, ಅವರು ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಪರ ಜೀವನದಲ್ಲಿಯೂ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರÉ.































