
ಕಲಬುರಗಿ,ಜೂ 16: ನಗರದ ಜಿಟಿಟಿಸಿ ಡಿಪೆÇ್ಲೀಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸಿನ ವಿದ್ಯಾರ್ಥಿನಿ ಅಂಕಿತ ರಾಜಕುಮಾರ ಅಳಂದ್ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ 3ನೇ ಸ್ಥಾನ ಪಡೆದಿದ್ದು ನಂತರ ಅಂತಿಮ ವರ್ಷದ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ವರ್ಗಾವಣೆ ತೆಗೆದುಕೊಂಡಿದ್ದರು. ಅಂತಿಮ ವರ್ಷದ 6ನೇ ಸೆಮಿಸ್ಟರ್ ಓದುವಾಗ ಜರ್ಮನಿಯಲ್ಲಿ ಇಂಟನ್ರ್ಶಿಪ್ 25 (ಲಕ್ಷ ಪ್ಯಾಕೇಜು) ಮತ್ತು ಉದ್ಯೋಗಕ್ಕೆ (35 ಲಕ್ಷ ಪ್ಯಾಕೇಜ್) ಪಡೆಯುವ ಆಯ್ಕೆಯಾಗಿದ್ದಕ್ಕೆ ವಿದ್ಯಾರ್ಥಿನಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಡಾ. ಪ್ರಭುದೇವ್ ಎಂ ಎಸ್, (ಸರ್ಕಾರಿ ಪಾಲಿಟೆಕ್ನಕ್ ಅಫಜಲಪುರ )ಹಾಗೂ ಕುಟುಂಬ ವರ್ಗದವರು ವಿದ್ಯಾರ್ಥಿನಿಯನ್ನು ಆತ್ಮೀಯವಾಗಿ ಸನ್ಮಾನಿಸಿದರು. ಜಿ ಟಿ ಟಿ ಸಿ ಪ್ರಾಂಶುಪಾಲರಾದ ಸುಧಾರಾಣಿ ಪ್ರಶಂಶಿಸಿದರು. ವಿದ್ಯಾರ್ಥಿನಿ ತಂದೆ ರಾಜಕುಮಾರ್ ಆಳಂದ್ ಮಹದೇವ್, ಲತಾ ಪಿ ಎಸ್ ಇದ್ದರು.


























