Home ಜಿಲ್ಲೆ ಕಾಮಗಾರಿಗೆ ಗುದ್ದಲಿ ಪೂಜೆ

ಕಾಮಗಾರಿಗೆ ಗುದ್ದಲಿ ಪೂಜೆ

ಚನ್ನಮ್ಮನ ಕಿತ್ತೂರು,ಅ೧೧: ಸರ್ಕಾರದಿಂದ ಈ ಅನುದಾನ ಬಂದು ಸುಮಾರು ದಿನವಾಯಿತು. ಕೆಲವು ಅಡೆತಡೆಗಳಿಂದ ಈ ಕಾಮಗಾರಿ ಸ್ಥಗಿತಗೊಂಡಿತು. ಮತ್ತೇ ಅದಕ್ಕೆ ಕಾಲ ಕೂಡಿ ಬಂದಿದೆ. ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.


ತಾಲೂಕಿನ ಇಟಗಿಕ್ರಾಸ್, ಮಾರ್ಗನಕೊಪ್ಪ ಗ್ರಾಮದಿಂದ ಕ್ಯಾರಕೊಪ್ಪ ಕ್ರಾಸ ಮಾರ್ಗವಾಗಿ ಶಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿ ರಸ್ತೆ ಡಾಂಬರಿಕರಣ ಹಾಗೂ ಪಟ್ಟಣದ ನ್ಯಾಯಾಧೀಶರ ಗೃಹ ಕಟ್ಟಡ ನಿರ್ಮಾಣ ಮತ್ತು ತಾಲೂಕಿನ ಕತ್ರಿದಡ್ಡಿ ಗ್ರಾಮದ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ಅಧ್ಯಕ್ಷತೆವಹಿಸಿ ಮಾತನಾಡಿದರು.


ಈ ಕಾಮಗಾರಿ ಪೂರ್ವದಲ್ಲಿ ಮುಗಿಯಬೇಕಿತ್ತು. ಆದರೆ ಮಳೆಗಾಲ ಪ್ರಾರಂಭವಾದ್ದರಿAದ ಸ್ಥಗಿತಗೊಂಡಿತ್ತು. ಅದಕ್ಕಾಗಿ ಈಗ ಕಾಮಗಾರಿ ಕೈಗೊಳ್ಳಲಾಗಿದ್ದು ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಮತ್ತು ಸುಧಾರಿಸುವ ನಿರೀಕ್ಷೆಯಲ್ಲಿದ್ದು ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ದಿನನಿತ್ಯ ಈ ಮಾರ್ಗದಿಂದ ತಮ್ಮ ವಾಹನಗಳ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿದೆ. ಇದರ ಸದ್ಭಳಕೆ ಎಲ್ಲರಿಗೆ ಆಗಬೇಕು. ಕ್ಷೇತ್ರದ ಅಭಿವೃದ್ದಿ ನನ್ನ ಕನಸಾಗಿದೆ ಎಂದರು. ವಿವಿಧ ಗ್ರಾಮದಿಂದ ಆಗಮಿಸಿದ ಸಾರ್ವಜನಿಕರು ಶಾಸಕರನ್ನು ಸತ್ಕರಿಸಿದರು.


ಕಾರ್ಯಕ್ರಮದಲ್ಲಿ ಬ್ಲಾಕ ಅಧ್ಯಕ್ಷ ಸಂಗನಗೌಡ ಪಾಟೀಲ, ಮಾಜಿ ತಾಪಂ ಸದಸ್ಯ ಮುದಕಪ್ಪ ಮರಡಿ, ಮ.ಸ.ಸ.ಕಾ.ಉಪಾಧ್ಯಕ್ಷ ಶಿವನಗೌಡ.ದೊ.ಪಾಟೀಲ, ಕ್ಯಾರಕೊಪ್ಪ ಬಸನÀಗೌಡ ಪಾಟೀಲ, ಶಿವನಗೌಡ.ಚ.ಪಾಟೀಲ, ದೇವೆಂದ್ರ ಮರೆಣ್ಣವರ, ಸಾಗರ ದೇಸಾಯಿ ಮಾತನಾಡಿದರು. ಪಿಡಬ್ಲೂಡಿ ಅಭಿಯಂತರ ಜಯಂತ ಗುಂಜಟ್ಕರಪಾಟೀಲ, ಶಿವಯೋಗಿ ದೊಡಮನಿ, ಮ.ಸ.ಸ.ಕಾ. ನಿರ್ದೇಶಕ ಶ್ರೀಶೈಲ್ ತುರಮರಿ, ಬಾಬು ಮರೆಣ್ಣವರ, ರುದ್ರಯ್ಯಾ ಹಿರೇಮಠ, ಗುತ್ತಿಗೆದಾರರು ಬುಡವಿ, ಲಕ್ಷö್ಮಣ ಪಾಟೀಲ, ಸಿಬ್ಬಂದಿ, ಕಾಂಗ್ರೇಸ್ ಕಾರ್ಯಕರ್ತರು, ಗಣ್ಯರು, ಗ್ರಾಮಸ್ಥರು, ಇತರರಿದ್ದರು.