
ಯಾದಗಿರಿ: ನಗರದ ಚಿರಂಜೀವಿ ಶಾಲಾ ಆವರಣದಲ್ಲಿ ಕ್ರೈಸ್ತ ಸಮುದಾಯದ ವತಿಯಿಂದ ಉಜ್ಜೀವನ ಕೂಟವನ್ನು ವಿಜೃಂಭಣೆಯಿAದ ಆಯೋಜಿಸಲಾಯಿತು. ಯಾದಗಿರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆ, ಸ್ತುತಿ-ಆರಾಧನೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಪಾಸ್ಟರ್‌ಗಳು ಹಾಗೂ ಕ್ರೈಸ್ತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಪಾ. ಪ್ರಕಾಶ್ ಹಾಲ್ಲಮಡಿ ಭಾಗವಹಿಸಿದ್ದರು. ಯಾದಗಿರಿ ಜಿಲ್ಲಾ ಮೇಲ್ವಿಚಾರಕರಾದ ರೇವ. ಎಸ್. ನಂದು ಕುಮಾರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಪಾಸ್ಟರ್ ಆಂಡ್ರೂ ರಿಚರ್ಡ್ ಅವರು ಆಧ್ಯಾತ್ಮಿಕ ಸಂದೇಶ ನೀಡಿದರು. ದೇವರ ಮೇಲಿನ ನಂಬಿಕೆ, ಪ್ರಾರ್ಥನೆಯ ಶಕ್ತಿ ಹಾಗೂ ಆಧ್ಯಾತ್ಮಿಕ ಜೀವನದ ಮಹತ್ವವನ್ನು ವಿವರಿಸಿದ ಅವರು, ಪ್ರತಿಯೊಬ್ಬರೂ ನಂಬಿಕೆ ಮತ್ತು ಪ್ರಾರ್ಥನೆಯ ಮೂಲಕ ಜೀವನದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು. ಅವರ ಸಂದೇಶ ಭಕ್ತರಲ್ಲಿ ಆತ್ಮವಿಶ್ವಾಸ ಹಾಗೂ ಆಧ್ಯಾತ್ಮಿಕ ಚೈತನ್ಯ ಮೂಡಿಸಿತು.
ಉಜ್ಜೀವನ ಕೂಟದ ಅಂಗವಾಗಿ ಮೆಥೋಡಿಸ್ಟ್ ಕೇಂದ್ರಿಯ ಚರ್ಚ್, ಯಾದಗಿರಿ ವತಿಯಿಂದ ಪಾಸ್ಟರ್ ಆಂಡ್ರೂ ರಿಚರ್ಡ್ ಹಾಗೂ ಪಾ. ಪ್ರಕಾಶ್ ಹಾಲ್ಲಮಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಮೇಲ್ವಿಚಾರಕ ರೇವ. ಎಸ್. ನಂದು ಕುಮಾರ್, ಶೋರಾಪುರ ಡಿಎಸ್ ಸೇರಿದಂತೆ ವಿವಿಧ ಧಾರ್ಮಿಕ ಸೇವಕರನ್ನು ಗೌರವಿಸಲಾಯಿತು. ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ವೆಂಕಟರೆಡ್ಡಿ ಮುದ್ನಾಳ್ ಹಾಗೂ ಬಿಜೆಪಿ ಮುಖಂಡ ರುದ್ರಪ್ಪ ಗೌಡ ಅವರನ್ನೂ ಸನ್ಮಾನಿಸಲಾಯಿತು.ಭೀಮಶಂಕರರಿAದ ಜೀವನದ ಸಾಕ್ಷ್ಯ
ಕಾರ್ಯಕ್ರಮದಲ್ಲಿ ಬೆಂಗಳೂರಿನ ಭೀಮಶಂಕರ ಅವರು ತಮ್ಮ ಜೀವನದ ಅನುಭವಗಳನ್ನು ಸಾಕ್ಷಿಯಾಗಿ ಹಂಚಿಕೊAಡರು. ದೇವರನ್ನು ಅರಿತು ನಂಬಿಕೆಯ ಜೀವನ ನಡೆಸಿದ ಬಳಿಕ ತಮ್ಮ ಕುಟುಂಬದಲ್ಲಿ ಕಂಡ ಬದಲಾವಣೆಗಳ ಕುರಿತು ಮಾತನಾಡಿದ ಅವರು, ತಮ್ಮ ಮಗಳು ಇಂದು ಒಃBS ವೈದ್ಯೆಯಾಗಿರುವುದಾಗಿ ತಿಳಿಸಿದರು. ದೇವರ ಕೃಪೆ ಹಾಗೂ ನಂಬಿಕೆಯ ಮಹತ್ವವನ್ನು ತಮ್ಮ ಜೀವನದ ಅನುಭವದ ಮೂಲಕ ವಿವರಿಸಿದರು.
ಉಜ್ಜೀವನ ಕೂಟದಲ್ಲಿ ಪ್ರಾರ್ಥನೆ, ಸ್ತುತಿ-ಆರಾಧನೆ ಹಾಗೂ ಆಧ್ಯಾತ್ಮಿಕ ಸಂದೇಶಗಳ ಮೂಲಕ ಭಕ್ತರಲ್ಲಿ ಹೊಸ ಚೈತನ್ಯ ಮೂಡಿಸಲಾಯಿತು. ಯಾದಗಿರಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನೂರಾರು ಕುಟುಂಬಗಳು ಒಂದೇ ವೇದಿಕೆಯಲ್ಲಿ ಸೇರಿ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ಭಾಗವಹಿಸಿದ್ದು, ಉಜ್ಜೀವನ ಕೂಟದ ಪ್ರಮುಖ ಆಕರ್ಷಣೆಯಾಗಿತ್ತು.





























