Home ಜಿಲ್ಲೆ ಸರ್ಕಾರಗಳು ನೇಕಾರರಿಗೆ ಪ್ರೋತ್ಸಾಹ ನೀಡುತ್ತಿಲ್ಲ

ಸರ್ಕಾರಗಳು ನೇಕಾರರಿಗೆ ಪ್ರೋತ್ಸಾಹ ನೀಡುತ್ತಿಲ್ಲ


ಗುಳೇದಗುಡ್ಡ,ಆ.೮: ಕÀ್ರಮೇಣವಾಗಿ ಕೈಮಗ್ಗ ನೇಕಾರಿಕೆ ಅವಸಾನದತ್ತ ಸಾಗುತ್ತಿದ್ದು, ನೇಕಾರರ ಬದುಕು ದುಸ್ಥಿತಿಗೆ ಬಂದಿದ್ದರೂ ಅಧಿಕಾರಕ್ಕೆ ಬಂದAತ ಎಲ್ಲ ಸರಕಾರಗಳು ಕೈಮಗ್ಗ ನೇಕಾರಿಕೆಗೆ ಉತ್ತೇಜನ ನೀಡುವಲ್ಲಿ ವಿಫಲವಾಗಿವೆ ಎಂದು ನೇಕಾರ ಮುಖಂಡ ಅಶೋಕ ಹೆಗಡೆ ವಿಷಾಧಿಸಿದರು. ಹೇಳಿದರು.


ಅವರು ೧೨ನೇ ರಾಷ್ಟಿçÃಯ ಕೈಮಗ್ಗ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ಶಿವಪ್ಪಯ್ಯ ಕೈಮಗ್ಗ ನೇಕಾರ ಸಂಘದ ವತಿಯಿಂದ ಹಮ್ಮಿಕೊಂಡ ಕೈಮಗ್ಗೆ ನೇಕಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕೈಮಗ್ಗ ನೇಕಾರಿಕೆಗೆ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅಂದಾಗ ಮಾತ್ರ ಕೈಮಗ್ಗ ನೇಕಾರರು ಬದುಕುತ್ತಾರೆ ಎಂದರು.


ಇದೇ ಸಂದರ್ಭದಲ್ಲಿ ೭೮ ವರ್ಷಗಳಾಗಿದ್ದರೂ ಇನ್ನೂ ಕೈಮಗ್ಗ ನೇಕಾರಿಕೆ ಮುಂದುವರಿಸಿದ ಶಿವಸಂಗಪ್ಪ ಕೆಲೂಡಿ ಹಾಗೂ ಪತ್ನಿ ಶಾಂತವ್ವ ಕೆಲೂಡಿ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೋಹನ ಮಲಜಿ. ಓಂಕಾರಪ್ಪ ದಿಂಡಿ, ಶಿವಾನಂದ ರೋಜಿ, ಶಿವಾನಂದ ತಿಪ್ಪಾ, ಬಸವರಾಜ ಜವಳಗಿ, ಮೋತಿಲಾಲ ತಗಡಗಾರ, ಬಸಪ್ಪ ಹರ್ತಿ, ಮಹಾಂತೇಶ ಕವಿಶೆಟ್ಟಿ, ಶಂಕರಿ ಇಟಗಿ, ಪ್ರಕಾಶ ಪಾಡಾ, ಸಿದ್ದಬಸಪ್ಪ ಕೆಲೂಡಿ ಮತ್ತಿತರರು ಉಪಸ್ಥಿತರಿದ್ದರು.