Home ಜಿಲ್ಲೆ ಸರ್ಕಾರದ ಯೋಜನೆಗಳು ಎಲ್ಲರಿಗೂ ಮುಟ್ಟಿಸುವ ಕಾರ್ಯವಾಗಲಿ : ಚವ್ಹಾಣ

ಸರ್ಕಾರದ ಯೋಜನೆಗಳು ಎಲ್ಲರಿಗೂ ಮುಟ್ಟಿಸುವ ಕಾರ್ಯವಾಗಲಿ : ಚವ್ಹಾಣ

ಭಾಲ್ಕಿ:ಜೂ.18: ಸರ್ಕಾರದ ಯೋಜನೆಗಳು ಎಲ್ಲರಿಗೂ ಮುಟ್ಟಿಸುವ ಕಾರ್ಯವಾಗಬೇಕು ಎಂದು ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಹಣಮಂತರಾವ ಚವ್ಹಾಣ ಹೇಳಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರೆಂಟಿ ಯೋಜನೆಯ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷೆತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಕರ್ಮಚಾರಿಗಳು ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಎಲ್ಲಾ ಫಲಾನುಭವಿಗಳಿಗೆ ಸದುಪಯೋಗ ವಾಗುವಂತೆ ಕಾರ್ಯಮಾಡಬೇಕು. ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಮತ್ತು ಗೃಹಜ್ಯೋತಿ ಯೋಜನೆ ಸೇರಿದಂತೆ ಪಂಚಗ್ಯಾರಂಟಿಯ ಎಲ್ಲಾ ಅಧಿಕಾರಿಗಳೊಂದಿಗೆ ಕೂಲಕುಂಶವಾಗಿ ಚರ್ಚಿಸಿ, ತಾಲೂಕಿನಲ್ಲಿ ಈ ಎಲ್ಲಾ ಯೋಜನೆಗಳ ಅನುಷ್ಠಾನ ಸರಿಯಾದ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುವುಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗೃಹ ಲಕ್ಷ್ಮಿ ಯೋಜನೆಗೆ ತಾಲೂಕಿನ 63996 ಫಲಾನುಭವಿಗಳು ನೊಂದಣಿ ಮಾಡಿಸಿದ್ದು ಅವರಲ್ಲಿ 63444 ಅರ್ಹ ಫಲಾನುಭವಿಗಳ ಖಾತೆಗೆ ಹಣ ನೀಡಲಾಗುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ತಾಲೂಕಿನಲ್ಲಿ ಒಟ್ಟು 80903 ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿದ್ದಾರೆ. ಇವರಲ್ಲಿ ಗ್ರಾಮೀಣ ಭಾಗದ 66547 ಮತ್ತು ಪಟ್ಟಣದ 14356 ಫಲಾನುಭವಿಗಳು ಅನ್ಯಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಆಹಾರ ನೀರೀಕ್ಷಕರು ಮಾಹಿತಿ ನೀಡಿದರು. ಶಕ್ತಿ ಯೋಜನೆಯ ಅಡಿಯಲ್ಲಿ ಸಾರಿಗೆ ಇಲಾಖೆಯವರು ಉತ್ತಮ ಸೇವೆ ಮಾಡಬೇಕು. ಕೆಲವುಸಲ ಬಸ್‍ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎನ್ನುವ ಆರೋಪ ಇದೆ ಅದನ್ನು ಸರಿಪಡಿಸಬೇಕು. ಭಾಲ್ಕಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ಶಾಲಾ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಬಸ್ ಒದಗಿಸಬೇಕು. ಶಾಲಾ ವಿದ್ಯಾರ್ಥಿಗಳು ಕೈ ಮಾಡಿದಲ್ಲಿ ಬಸ್ ನಿಲ್ಲಿಸಿ ಅವರನ್ನು ಹತ್ತಿಸಿಕೊಳ್ಳಬೇಕು ಎಂದು ಗ್ಯಾರೆಂಟಿ ಯೋಜನೆಯ ನೋಡಲ್ ಅಧಿಕಾರಿ ರಾಜಶೇಖರ ನೆಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿ ತಾಕೀತು ಮಾಡಿದರು.
ಯುವನಿಧಿ ಯೋಜನೆಯಲ್ಲಿ ತಾಲೂಕಿನ 3001 ವಿದ್ಯಾರ್ಥಿಗಳು ತಮ್ಮ ಹೆಸರು ನೊಂದಣಿ ಮಾಡಿಕೊಂಡಿದ್ದು, ಫೆ.2026ರ ತಿಂಗಳಲ್ಲಿ ಪದವಿಧರ 1071 ಮತ್ತು ಡಿಪ್ಲೋಮಾ 19 ಒಟ್ಟು 1090 ವಿದ್ಯಾರ್ಥಿಗಳಿಗೆ ಮತ್ತು ಮಾ.2026 ರಲ್ಲಿ ಪದವಿಧರ 1180 ಮತ್ತು ಡಿಪ್ಲೋಮಾ 20 ಒಟ್ಟು 1200 ವಿದ್ಯಾರ್ಥಿಗಳಿಗೆ, ಎ.2026 ರಲ್ಲಿ ಪದವಿಧರ 1040 ಮತ್ತು ಡಿಪ್ಲೋಮಾ 19 ಒಟ್ಟು 1059 ವಿದ್ಯಾರ್ಥಿಗಳಿಗೆ ಯುವನಿಧಿ ಹಣ ಸಂದಾಯಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ತಾಲೂಕಿನಲ್ಲಿ 60270 ಗ್ರಾಹಕರಿದ್ದಾರೆ ಇವರಲ್ಲಿ ಸರಾಸರಿ 200 ಯುನಿಟಗಳ ಮೇಲಿನ ಬಳಕೆಯ ಗ್ರಾಹಕರು 858, ಆಗಿದ್ದು ಒಟ್ಟು ಗ್ರಾಹಕರು 59753 ಇದ್ದಾರೆ. ಇವರಲ್ಲಿ 58271 ಗ್ರಾಹಕರು ತಮ್ಮ ಹೆಸರು ನೊಂದಾಯಿಸಿದ್ದಾರೆ. 1482 ಗ್ರಾಹಕರು ನೊಂದಾಯಿಸಲು ಬಾಕಿ ಇದ್ದಾರೆ. ಇಲ್ಲಿಯವರೆಗೆ ಗೃಹ ಜ್ಯೋತಿ ಬಳಕೆ 90.15 ಮಿಲಿಯನ್ ಯುನಿಟ್ ಗಳಾಗಿದ್ದು, ಅಗಷ್ಟ 23 ರಿಮದ ಮೇ.26 ರವರೆಗೆ 89.72 ಕೊಟಿ ರೂ. ಬೇಡಿಕೆಯಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಗ್ರಾಹಕರ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆಕ್ಷೇಪಗಳು ಬರುತ್ತಿವೆ. ಬಿಲ್ ನೀಡುವಾಗ ಎಲ್ಲವನ್ನು ಸರಿಪಡಿಸಿಕೊಂಡು ಹೋಗಬೇಕು ಎಂದು ಗ್ಯಾರೆಂಟಿ ಯೋಜನೆಯ ನೋಡಲ್ ಅಧಿಕಾರಿಗಳು ಜೆಸ್ಕಾಂ ಎಇಇಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಗ್ಯಾರೆಂಟಿ ಯೋಜನೆಯ ಸದಸ್ಯರುಗಳಾದ ವಿಲಾಸ ಪಾಟೀಲ ದಾಡಗಿ, ಕೈಲಾಸ ಶಿವಾಜಿ ಭಾವಿಕಟ್ಟೆ, ಧನರಾಜ ಪಾಟೀಲ, ಓಂಕಾರ ರಾಮಶೆಟ್ಟಿ, ಸಂಗಮೇಶ ವಾಲಿ, ಜೈಶ್ರೀ ಮಾನಕಾರಿ, ಪಾಂಡುರಂಗ ಕಣಜೆ, ದಿಲೀಪ ಪಾಟೀಲ, ಸಂಜುಕುಮಾರ ಶಂಕರೆಪ್ಪ, ಮಂಗಳಾ ಬಾಬುರಾವ, ಸತೀಷ ಮಾಳಗೆ, ಗೋಪಾಲ ಸೂರ್ಯವಂಶಿ, ತಾ.ಪಂ. ಸಿಬ್ಬಂದಿ ಸುನೀಲ ಸೇರಿದಂತೆ ಎಲ್ಲಾ ಯೋಜನೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.