Home ಜಿಲ್ಲೆ ಕಲಬುರಗಿ ಬಸ್ ಹತ್ತುವಾಗ 2.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಬಸ್ ಹತ್ತುವಾಗ 2.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ,ಮೇ.15-ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 2.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಲಕ್ಷ್ಮೀನಗರದ ಆರತಿ ಉಮೇಶ ಶೆಟಗಾರ ಎಂಬುವವರು ಮಕ್ಕಳೊಂದಿಗೆ ಸೊಲ್ಲಾಪುರದಲ್ಲಿರುವ ತಮ್ಮ ಸಹೋದರನ ಮಗಳ ನಾಮಕರಣ ಹೋಗಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಸೊಲ್ಲಾಪುರದಿಂದ ಮರಳಿ ಕಲಬುರಗಿಗೆ ಬಂದಿದ್ದಾರೆ. ಕಲಬುರಗಿಯಿಂದ ಯಾದಗಿರಿಗೆ ಹೋಗಲೆಂದು ಕೇಂದ್ರ ಬಸ್ ನಿಲ್ದಾಣದ ಪ್ಲಾಟ್ ಫಾರಂ.ನಂ.11ರಲ್ಲಿ ಯಾದಗಿರಿಗೆ ಹೋಗುವ ಬಸ್ ಹತ್ತಿದ್ದಾರೆ. ಈ ವೇಳೆ ಅವರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 1.5ಂ ಲಕ್ಷ ರೂ.ಮೌಲ್ಯದ 13 ಗ್ರಾಂ.ಬಂಗಾರದ ಲಾಕೆಟ್, 75 ಸಾವಿರ ರೂ.ಮೌಲ್ಯದ 5 ಗ್ರಾಂ. ಉಂಗುರ ಸೇರಿ 2.25 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾಗಿವೆ. ಈ ಸಂಬಂಧ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.