
ಕಲಬುರಗಿ : ಅಂತರ್ಮಹಾವಿದ್ಯಾಲಯ ಚೆಸ್ ಕ್ರೀಡಾಕೂಟದಲ್ಲಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ನಗರದ ಬಿಬಿ ರಜಾ ಮಹಾವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವಿದ್ಯಾರ್ಥಿನಿಯರಾದ ಕು.ಭಾಗ್ಯವಂತಿ, ಕು.ದೀಪಿಕಾ, ಕು.ಪ್ರೇಮಾ, ಕು.ಶ್ವೇತಾ, ಕು.ಅಂಬಿಕಾ ಮತ್ತು ಕು.ರಾಧಿಕಾ ಪ್ರಶಸ್ತಿ ಪಡೆದಿದ್ದಾರೆ. ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ರಾಜಲಕ್ಷ್ಮೀ ಡಿ ಅವರು ತರಬೇತಿ ನೀಡಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸೀಮಾ ಪಾಟೀಲ, ಶಿಕ್ಷಕ ಮತ್ತು ಶಿಕ್ಷಕೇತರರು ಅಭಿನಂದಿಸಿದ್ದಾರೆ.






















