Home ಜಿಲ್ಲೆ ಬೆಂಗಳೂರು ರಕ್ತದೊತ್ತಡ ತಪಾಸಣೆಗೆ ಒಳಗಾಗಿ ಸಮಸ್ಯೆ ನಿಯಂತ್ರಿಸಿ -ಡಾ.ಶ್ರೀನಿವಾಸ್

ರಕ್ತದೊತ್ತಡ ತಪಾಸಣೆಗೆ ಒಳಗಾಗಿ ಸಮಸ್ಯೆ ನಿಯಂತ್ರಿಸಿ -ಡಾ.ಶ್ರೀನಿವಾಸ್

ಕೋಲಾರ,ಜೂ,೧-ಪ್ರಪಂಚದಾದ್ಯಂತ ತೀವ್ರವಾಗಿ ಹೆಚ್ಚುತ್ತಿರುವ ರಕ್ತದೊತ್ತಡ ಸಮಸ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಇದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ವಿಶ್ವ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತಿದೆ ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ಉಂಟಾಗ ಬಹುದಾದ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್ ಎಸ್.ವಿ. ಅಭಿಪ್ರಾಯಪಟ್ಟರು


ನಗರದ ಹೊಸ ಬಸ್ ನಿಲ್ದಾಣದಲ್ಲಿ ‘ವಿಶ್ವ ರಕ್ತದೊತ್ತಡ ದಿನಾಚರಣೆ’ ಅಂಗವಾಗಿ ಆರ್. ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಾಮಾನ್ಯ ವೈದ್ಯಕೀಯ ವಿಭಾಗದ ವತಿಯಿಂದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾ ಡಾ.ಪ್ರಭಾಕರ್ ಕೆ ಅವರ ಮಾರ್ಗದರ್ಶನದಲ್ಲಿ ಉಚಿತ ರಕ್ತದೊತ್ತಡ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.


ಅಧಿಕ ರಕ್ತದೊತ್ತಡಕ್ಕೆ ಯಾವುದೇ ಆರಂಭಿಕ ಲಕ್ಷಣಗಳು ಇರುವುದಿಲ್ಲ ಆದ್ದರಿಂದ ಇದನ್ನು “ಸೈಲೆಂಟ್ ಕಿಲ್ಲರ್ ಎನ್ನಲಾಗುತ್ತದೆ ಎಂದ ಅವರು, ಅರಿವಿನ ಕೊರತೆಯಿಂದಾಗಿ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದೆ, ಆದ್ದರಿಂದ ಜಾಗತಿಕವಾಗಿ ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಶೇಕಡಾ ೫೦ ಕ್ಕಿಂತ ಹೆಚ್ಚು ಜನರಿಗೆ ತಮಗೆ ಈ ಕಾಯಿಲೆ ಇದೆ ಎಂಬುವುದರ ಅರಿವು ಇರುವುದಿಲ್ಲ ತಪಾಸಣೆಗೆ ಒಳಪಟ್ಟಾಗಲೇ ಈ ಸಮಸ್ಯೆ ಬೆಳಕಿಗೆ ಬರುವುದು ಎಂದರು.


ಆದ್ದರಿಂದಲೇ ಈ ದಿನಾಚರಣೆಯ ಮುಖ್ಯ ಗುರಿ ಸಾರ್ವಜನಿಕರಲ್ಲಿ ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸುವ ಮೂಲಕ ಸಾವು ಮತ್ತಿತರ ಅನಾಹುತ ತಪ್ಪಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.


ಶಿಬಿರದಲ್ಲಿ ಪ್ರೊ.ಡಾ.ರವೀಶ್, ಡಾ.ಮಂಜುನಾಥ್.ಎನ್, ಡಾ.ಶ್ರೀನಿವಾಸ್, ಡಾ.ರವೀಶ್, ಡಾ.ಮಂಜುನಾಥ್.ಎನ್ ಹಾಗೂ ಜನರಲ್ ಮೆಡಿಸಿನ್ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಸಾರ್ವಜನಿಕರಿಗೆ ಉಚಿತ ರಕ್ತದೊತ್ತಡ ತಪಾಸಣೆ ನಡೆಸಿ ಉಚಿತ ಔಷಧಿಗಳನ್ನು ವಿತರಿಸಿದರು. ಶಿಬಿರದಲ್ಲಿ ೨೦೦ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡುವ ಮೂಲಕ ರಕ್ತದೊತ್ತಡದ ಬಗ್ಗೆ ಜಾಗೃತಿ ಮೂಡಿಸಲಾಯಿತು.