Home ಜಿಲ್ಲೆ ಕಲಬುರಗಿ 1.21 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ

1.21 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ

ಕಲಬುರಗಿ,ಅ.28-ನಗರದ ರೋಜಾ (ಬಿ)ಯ ಸೈಯದ್ ಗಲ್ಲಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ರೋಜಾ ಪೊಲೀಸ್ ಠಾಣೆ ಪಿಐ ದಿಲೀಪ್‍ಕುಮಾರ ಸಾಗರ, ಸಿಬ್ಬಂದಿಗಳಾದ ಶಿವಕುಮಾರ, ಯಲ್ಲಪ್ಪ, ಮಹಿಳಾ ಪೇದೆ ಅಂಬಿಕಾ ಅವರು ದಾಳಿ ನಡೆಸಿ ಸೈಯದ್ ಗಲ್ಲಿಯ ಮೊಹಮ್ಮದ್ ಅಲ್ತಾಫ್ ಎಂಬಾತನನ್ನು ಬಂಧಿಸಿ 1.21 ಲಕ್ಷ ರೂ.ಮೌಲ್ಯದ 1.210 ಕೆ.ಜಿ.ತೂಕದ ಗಾಂಜಾ ಜಪ್ತಿ ಮಾಡಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.