Home ಜಿಲ್ಲೆ ಕಲೆ ಅನಾವರಣಕ್ಕೆ ವೇದಿಕೆಯಾದ ಜನಪದ ಸಂಭ್ರಮ

ಕಲೆ ಅನಾವರಣಕ್ಕೆ ವೇದಿಕೆಯಾದ ಜನಪದ ಸಂಭ್ರಮ

ಬೀದರ್: ಅಹಿಲ್ಯಾಬಾಯಿ ಹೋಳ್ಕರ ಸಾಂಸ್ಕøತಿಕ ಮಹಿಳಾ ಸಂಘವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಇಲ್ಲಿಯ ಕುಂಬಾರವಾಡ ರಸ್ತೆಯಲ್ಲಿ ಇರುವ ಕರುನಾಡ ಸಾಂಸ್ಕತಿಕ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮವು ಜಾನಪದದ ವಿವಿಧ ಕಲೆಗಳ ಅನಾವರಣಕ್ಕೆ ವೇದಿಕೆಯಾಯಿತು.
ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ಕಲಾವಿದ ಮಲ್ಲಿಕಾರ್ಜುನ ರಾಂಪುರೆ ವಚನ ಗಾಯನ, ಕರಬಸಪ್ಪ ವಿಶ್ವಕರ್ಮ ದಾಸರ ಪದ, ಮನೋಹರ ಹುಪಳಾ, ಮಲ್ಲಿಕಾರ್ಜುನ ಪಾಟೀಲ, ಅಂಜಲಿ, ಕೃಷ್ಣರಾಜ ಜಾನಪದ ಗೀತೆ, ಜಗದೇವಿ ವಡಗಾಂವ್ ಭಕ್ತಿ ಗೀತೆ, ಸಿದ್ರಾಮಯ್ಯ ಸ್ವಾಮಿ ಭಜನೆ ಪದ, ಕಾಶಿನಾಥ ಭಂಗೂರೆ ತತ್ವಪದ, ಇಂದುಮತಿ ಬೀಸುವ ಪದ, ಶೋಭಾವತಿ ಕುಟ್ಟುವ ಪದ, ಸುವರ್ಣಾ ಐರಾಣಿ ಪದ, ಸಂತೋಷಕುಮಾರ ಹಂತಿ ಪದ, ಸುಶೀಲಮ್ಮ ಮೋಹರಂ ಪದ, ಸಂಗಮ್ಮ ಸಾಂಪ್ರದಾಯಿಕ ಪದ ಹಾಡಿ ರಂಜಿಸಿದರು. ವಿದ್ಯಾನಗರ ಕಲಾ ತಂಡದ ಕಲಾವಿದರು ವಚನ ಗಾಯನ ಹಾಗೂ ಲಕ್ಷ್ಮಿ ತಂಡದವರು ಸಾಂಪ್ರದಾಯಿಕ ಪದ ಪ್ರಸ್ತುತಪಡಿಸಿದರು.
ಪೆÇ್ರೀತ್ಸಾಹ ಅಗತ್ಯ: ಜಾನಪದ ಕಲೆ ಹಾಗೂ ಕಲಾವಿದರಿಗೆ ಪೆÇ್ರೀತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಹೇಳಿದರು.
ಕಲೆ ಹಾಗೂ ಕಲಾವಿದರ ಬೆಳವಣಿಗೆಗೆ ಜಾನಪದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಜಾನಪದ ಕಲಾ ಪ್ರಕಾರಗಳ ಉಳಿವಿಗೆ ಯುವ ಶಕ್ತಿ ಆಸಕ್ತಿ ತೋರಬೇಕಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಲೆ ಹಾಗೂ ಕಲಾವಿದರಿಗೆ ಉತ್ತೇಜನ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಮುಖಂಡ ವಿಠ್ಠಲರಾವ್ ಭಂಗೂರೆ ಮಾತನಾಡಿದರು. ಚಿಂತಕಿ ಗಾಯತ್ರಿ ಮೇತ್ರೆ ವಿಶೇಷ ಉಪನ್ಯಾಸ ನೀಡಿದರು.
ಜೈ ಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮಿಬಾಯಿ ಚಿದ್ರಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಕಾಂಚನಾ ಸ್ವಾಗತಿಸಿದರು. ಎಂ.ಪಿ. ವೈಜಿನಾಥ ನಿರೂಪಿಸಿದರು. ಅಂಜಲಿ ವಂದಿಸಿದರು.