
ಲಕ್ಷೆ÷್ಮÃಶ್ವರ,ಸೆ೯: ಭೀಕರ ಬರಗಾಲ ಆವರಿಸಿದ್ದು ರೈತರು ಅವರ ಜೀವನಾಡಿ ಜಾನುವಾರಗಳ ಪೋಷಣೆಗಾಗಿ ಹರಸಾಹಸ ಪಡುತ್ತಿದ್ದಾರೆ. ಒಂದು ಕಡೆ ಕುಡಿಯಲು ಕೆರೆ ಕಟ್ಟೆ ಹಳ್ಳ ಕೊಳ್ಳಗಳಲ್ಲಿ ಹನಿ ನೀರು ಇಲ್ಲ ಮೇಯಲು ಜಾನುವಾರುಗಳಿಗೆ ಮೇವು ಹೂಟ್ಟು ಸೊಪ್ಪಿ ಇಲ್ಲದಂತಾಗಿ ಮಾರಾಟ ಮಾಡಲು ಆಗದೆ ಅವುಗಳನ್ನು ಪೋಷಿಸಲು ನೂರಾರು ಕಿಲೋಮೀಟರ್ ದೂರ ಸಾಗಿ ಜೀವನಾಡಿಗಳ ಉಳಿಸಿಕೊಳ್ಳಲು ಬಿಸಿಲನ್ನು ಲೆಕ್ಕಿಸದೆ ನೂರಾರು ದೇಶಿಯ ತಳಿಯ ಆಕಳುಗಳನ್ನು ಕಟ್ಟಿಕೊಂಡು ಊರೂರು ಅಲಿಯುತ್ತಿರುವ ಜಾನುವಾರುಗಳ ಮಾಲೀಕರನ್ನು ಕಂಡು ಮಮ್ಮಲ ಮರುಗುವಂತಹ ದೃಶ್ಯ ಎಂಥವರ ಕರ್ಳನ್ನು ಹಿಂಡುವAತಿದೆ.
ಬಹುತೇಕ ಕಡೆ ಕೆರೆಕಟ್ಟೆಗಳು, ಬಾಂಧಾರಗಳು ಒಣಗಿ ನಿಂತಿದ್ದು ಅಂತರ್ಜಲ ಮಟ್ಟ ಕುಸಿತವಾಗಿ ನೀರಿನ ಬವಣೆ, ಮೇವಿನ ಕೊರತೆ ಎದ್ದು ಎಲ್ಲರೂ ಪರಿತಪಿಸುವಂತಾಗುವ ಸ್ಥಿತಿ ಎದುರಾಗುವ ಭೀತಿ ಕಾಣುತ್ತಿದೆ.































