Home ಜಿಲ್ಲೆ ಕಲಬುರಗಿ ಚಿಕಿತ್ಸೆ ಫಲಿಸದೇ ವಿಷ ಕುಡಿದಿದ್ದ ರೈತ ಸಾವು

ಚಿಕಿತ್ಸೆ ಫಲಿಸದೇ ವಿಷ ಕುಡಿದಿದ್ದ ರೈತ ಸಾವು

ಜೇವರಗಿ,ಜೂ.18: ಸಾಲಬಾಧೆಯಿಂದ ಬೇಸತ್ತು ಕಳೆದ ಜೂ.4 ರಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಯುವ ರೈತ ಆನಂದ ರಾಠೋಡ (27) ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾರೆ. ತಾಲ್ಲೂಕಿನ ಜೈನಾಪೂರ ಗ್ರಾಮದಲ್ಲಿ ಈ ಅವಘಡ ನಡೆದಿದೆ.
ತನ್ನ ಸ್ವಂತ 4 ಎಕರೆ ಸೇರಿದಂತೆ ಬೇರೆಯವರ 20ಕ್ಕೂ ಹೆಚ್ಚು ಎಕರೆ ಜಮೀನು ಲೀಸ್ ಹಾಕಿಕೊಂಡು ಕೃಷಿ ಮಾಡುತ್ತಿದ್ದರು. ಕಳೆದ ವರ್ಷದ ಅತಿವೃಷ್ಟಿಯಿಂದ ಬೆಳೆ ಕೈಕೊಟ್ಟಿದ್ದರಿಂದ ನಷ್ಟ ಅನುಭವಿಸಿದ್ದರು.ಕೃಷಿಗಾಗಿ ಜೇವರ್ಗಿ , ಆಂದೋಲಾದ ಬ್ಯಾಂಕ್ ಗಳಲ್ಲಿ ಹಾಗೂ ಖಾಸಗಿಯಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಮನನೊಂದು ಜೂನ್ 4 ರಂದು ವಿಷ ಕುಡಿದಿದ್ದರು. ಅವರನ್ನು ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ.ಜೇವರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ