
ಬಸವನ ಬಾಗೇವಾಡಿ,ಜೂ 10: ತಾಲೂಕಿನ ಹಾಲಿಹಾಳ ಗ್ರಾಮದಲ್ಲಿ ಇಂದು ಬೆಳಗಿನ ಜಾವ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.ರುದ್ರಯ್ಯ ಮಲ್ಲಯ್ಯ ಹಿರೇಮಠ್ ( 55) ಹಾಲಿಹಾಳ
ಮೃತ ದುರ್ದೈವಿ .
ಬೆಳಗ್ಗೆ 6 ಗಂಟೆ ಸುಮಾರಿಗೆ ಹೊಲ ಬಿತ್ತುವ ಸಲುವಾಗಿ ಹೊಲಕ್ಕೆ ಬಂದಿದ್ದ.ಹೊಲದಲ್ಲಿನ ಬಾವಿ ಹತ್ತಿರದ ಲೈಟ್ ಕಂಬದ ತಂತಿ ಕಟ್ ಆಗಿದ್ದು ಮೊದಲಿನಿಂದಲೂ ಕಟ್ಟಾಗಿ ಬಿದ್ದಿದ್ದು ಇತ್ತು .ನಂತರ ಅದರ ಸಂಪರ್ಕ ಕಡಿತ ಮಾಡಲಾಗಿತ್ತು.ಇವತ್ತು ಬೆಳಗ್ಗೆ ಏಕಾಏಕಿ ಆ ವಯರಿನಲ್ಲಿ ಮೇಲಿನಿಂದ ಕರೆಂಟ್ ಹರಿದಿದೆ.ಇದನ್ನು ಅರಿಯದ ರೈತ ರುದ್ರಯ್ಯ ಹೊಲ ಉಳುವ ಸಲುವಾಗಿ ಆ ತಂತಿ ಸರಿಸಿ ಬದುವಿಗೆ ಇಡಲು ಹೋದಾಗ ಅವನ ಕೊರಳಿಗೆ ಸುತ್ತಿಕೊಂಡು ಮೃತನಾಗಿದ್ದಾನೆ ಎಂದು ತಿಳಿದು ಬಂದಿದೆ.


























