Home ಜಿಲ್ಲೆ ಕಲಬುರಗಿ ಲೈನ್ ಮ್ಯಾನ್ ನಿರ್ಲಕ್ಷ್ಯದಿಂದ ವಿದ್ಯುತ್ ತಗುಲಿ ಸಾವನ್ನಪ್ಪಿದ ರೈತ ಬಸಪ್ಪ ಪೂಜಾರಿ

ಲೈನ್ ಮ್ಯಾನ್ ನಿರ್ಲಕ್ಷ್ಯದಿಂದ ವಿದ್ಯುತ್ ತಗುಲಿ ಸಾವನ್ನಪ್ಪಿದ ರೈತ ಬಸಪ್ಪ ಪೂಜಾರಿ

ಅಫಜಲಪುರ:ಜೂ.27: ವಿದ್ಯುತ್ ತಂತಿ ಜೋಡಿಸಲು ಲೈನ್ ಮ್ಯಾನ್ ತನ್ನ ಬದಲಿಗೆ ರೈತ ಬಸಪ್ಪ ಪೂಜಾರಿ (42) ಎನ್ನುವವರನ್ನು ವಿದ್ಯುತ್ ಕಂಬಕ್ಕೆ ಏರಿಸಿದಾಗ ತಂತಿ ಸ್ಪರ್ಶಿಸಿ ವಿದ್ಯುತ್ ತಗುಲಿ ದಾರುಣವಾಗಿ ರೈತ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ತಾಲೂಕಿನ ಅಳ್ಳಗಿ(ಕೆ) ಗ್ರಾಮದ ರೈತ ಬಸಪ್ಪ ಪೂಜಾರಿ ಎನ್ನುವವರನ್ನು ಲೈನ್ ಮ್ಯಾನ್ ಗುಂಡೋಜಿ ಚೌವ್ಹಾಣ್ ಎನ್ನುವವರು ಕರೆದುಕೊಂಡು ಹೋಗಿ ವಿದ್ಯುತ್ ತಂತಿ ಕಡಿತಗೊಂಡಿದೆ. ನನಗೆ ಕಂಬ ಇರಲು ಆಗುವುದಿಲ್ಲ, ಈಗ ಎಲ್.ಸಿ ತೆಗೆದುಕೊಂಡಿದ್ದೇನೆ ನೀನೇ ಕಂಬ ಏರಿ ವಿದ್ಯುತ್ ತಂತಿ ಸರಿಪಡಿಸು ಎಂದಾಕ್ಷಣ ವಿದ್ಯುತ್ ಕಂಬ ಏರಿದ ರೈತ ಬಸಪ್ಪ ಪೂಜಾರಿ ಇವರು ವಿದ್ಯುತ್ ತಂತಿ ಸ್ಪರ್ಶಿಸಿದಾಗ ಭೀಕರವಾಗಿ ವಿದ್ಯುತ್ ತಗುಲಿದೆ. ತಕ್ಷಣವೇ ಅಫಜಲಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ರು ಕೂಡ ಕೊನೆಗೂ ರೈತ ಮೃತಪಟ್ಟಿದ್ದಾರೆ.ಈ ಘಟನೆ ಸಂಭವಿಸುತ್ತಿದ್ದಂತೆ ಪ್ರಗತಿಪರ ರೈತ ಸಂಘಟನೆಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೂಗಾರ ಮಾತನಾಡಿ,ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಬಸಪ್ಪ ಪೂಜಾರಿ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡುವುದರ ಜತೆಗೆ ಸರ್ಕಾರದಿಂದ ಮಕ್ಕಳಿಗೆ ನೆರವು ಆಗುವಂತೆ ಸೌಲಭ್ಯಗಳನ್ನು ಒದಗಿಸಬೇಕು,ರಾಜ್ಯ ಸರ್ಕಾರ ರೈತರನ್ನು ನಿರಂತರವಾಗಿ ಕಡೆಗಣನೆ ಮಾಡುತ್ತಿದೆ ಎಂದು ದೂರಿದ್ದರು.

ಪ್ರಗತಿಪರ ಹೋರಾಟಗಾರ ಶ್ರೀಮಂತ ಬಿರಾದಾರ ಮಾತನಾಡಿ,ಜೆಸ್ಕಾಂ ಅಧಿಕಾರಿಗಳು ನಿರಂತರವಾಗಿ ನಿರ್ಲಕ್ಷ್ಯ ವಹಿಸಿಕೊಳ್ಳುತ್ತಿದ್ದಾರೆ. ಎಲ್.ಸಿ ಇಲ್ಲದಿದ್ದರೂ ಯಾವ ಕಾರಣಕ್ಕೆ ಲೈನ್ ಮ್ಯಾನ್ ಗುಂಡೋಜಿ ಚೌವ್ಹಾಣ್ ಅವರು ರೈತ ಬಸಪ್ಪ ಪೂಜಾರಿ ಅವರಿಗೆ ವಿದ್ಯುತ್ ಕಂಬ ಏರಿಸಿದ್ದು,ಪ್ರತಿ ತಿಂಗಳು ಲಕ್ಷಾಂತರ ರೂ.ಸಂಬಳ ಪಡೆದುಕೊಂಡು ರೈತರಿಗೆ ವಿದ್ಯುತ್ ಕಂಬ ಏರಿಸುವುದಾದರೆ ಲೈನ್ ಮ್ಯಾನ್ ಗಳ ಕೆಲಸವೇನು,ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ಮೃತಪಟ್ಟ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು.

ಜೆಸ್ಕಾಂ ಇಇ ಮುರುಗೇಶ್ ಮಠಪತಿ ಮಾತನಾಡಿ, ಒಬ್ಬ ಅಧಿಕಾರಿ ತಪ್ಪಿನಿಂದ ಆಗಿರುವ ದುರ್ಘಟನೆ ಸರ್ಕಾರದಿಂದ ಪರಿಹಾರ ನೀಡಲು ಅವಕಾಶವಿಲ್ಲ. ಇಲಾಖೆ ತಪ್ಪಿನಿಂದಾಗಿ ನಡೆದಿರುವ ದುರ್ಘಟನೆಗೆ ಪರಿಹಾರ ನೀಡಲು ಅವಕಾಶವಿದೆ. ಮೇಲಾಧಿಕಾರಿಗಳ ಮನವೊಲಿಸಿ 5ಲಕ್ಷ ರೂ.ಪರಿಹಾರ ನೀಡಲಾಗುವುದು, ಕಚೇರಿಯ ಸಿಬ್ಬಂದಿಗಳಿಂದ 8 ಲಕ್ಷ ರೂ. ಸಂಗ್ರಹಿಸಿ ಕೊಡಲಾಗುವುದು.ವ2ಲಕ್ಷ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೊಡಲು ಪತ್ರ ಬರೆಯಲಾಗುವುದು, ನೌಕರಿ ಕೊಡಲು ಅವಕಾಶವಿಲ್ಲ, ಆದರೆ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರಿಂದ ಹೋರಾಟಗಾರರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್ಪಿ ತಮ್ಮರಾಯ ಪಾಟೀಲ್, ತಹಶೀಲ್ದಾರ್ ಸಂಜೀವಕುಮಾರ ದಾಸರ, ಇಇ ಮುರುಗೇಶ್ ಮಠಪತಿ, ಎಇಇ ನಾಗರಾಜ್ ಕೆ,ಸಿಪಿಐ ಲಖನ್ ಮಸಗುಪ್ಪಿ, ಪಿಎ???ಗಳಾದ ಸೋಮಲಿಂಗ ಒಡೆಯರ್, ವಾತ್ಸಲ್ಯ ಬಿರಾದಾರ, ಸಂಗೀತಾ ಸಿಂಧೆ, ಹೋರಾಟಗಾರ ಶಾಂತಕುಮಾರ ಅಂಜುಟಗಿ, ರಮೇಶ್ ಪೂಜಾರಿ, ಮಹಾಂತೇಶ ಜಮಾದಾರ, ಬಸವರಾಜಗೌಡ ಪಾಟೀಲ್, ಸಿದ್ದು ಮಗಿ,ಸಿದ್ದು ದಣ್ಣೂರ, ಮಹಾಂತೇಶ ಬಡಿಗೇರ, ರಮೇಶ್ ಪಾಟೀಲ್, ಎಂ.ಎಲ್.ಪಟೇಲ್ ಬಳೂಂಡಗಿ, ಅಶೋಕ್ ಪವಾರ್,ನೂರೋದ್ದಿನ್ ಬಾಗವಾನ, ಇಮಾಮ್ ಶೇಖ್, ರಮೇಶ್ ಶೆಟ್ಟಿ, ಸಿದ್ದು ಪೂಜಾರಿ, ಬೀರಣ್ಣ ಕನಕ ಟೇಲರ್,ರಾಜಸಾಬ ಶೇಖ್, ರವಿ ನಾಗಪ್ಪ ಬೋರಟಗಿ, ರಹುಬಾ ಪಾಟೀಲ್, ಶ್ರೀಶೈಲ್ ಹೊಸಮನಿ, ಶಾಮ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರೈತ ಬಸಪ್ಪನ ಮೂವರು ಮಕ್ಕಳಿಗೆ ಅನ್ಯಾಯ ಆಗದಂತೆ ಸರಕಾರವೇ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಬೇಕು, ಕುಟುಂಬಕ್ಕೆ ಆಸರೆ ಆಗುವಂತೆ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು. ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ಇಂತಹ ದುರ್ಘಟನೆ ಸಂಭವಿಸಿದಂತೆ ಎಚ್ಚರ ವಹಿಸಬೇಕು. ಶಾಸಕರೊಂದಿಗೆ ಚೆರ್ಚಿಸಿ ಸರ್ಕಾರದ ವತಿಯಿಂದ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನ ಮಾಡಲಾಗುವುದು.

-ಲಚ್ಚಪ್ಪ ಎಸ್. ಜಮಾದಾರ

ಅಧ್ಯಕ್ಷರು, ಕೋಲಿ ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ಹಾಗೂ ಕಾಂಗ್ರೆಸ್ ಮುಖಂಡರು, ಅಫಜಲಪುರ

ಪ್ರಯಾಣಿಕರ ಪರದಾಟ!

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ರೈತ ಬಸಪ್ಪ ಪೂಜಾರಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಪ್ರಗತಿಪರ ರೈತ ಹೋರಾಟಗಾರರು ಬಸವೇಶ್ವರ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು 7 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ಸುಮಾರು 5-6 ಕಿಲೋಮೀಟರವರೆಗೆ ವಾಹನಗಳು ನಿಂತಿಕೊಂಡಿರುವುದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ವಾಹನಗಳ ಸುಗಮವಾಗುವಂತೆ ಪೆÇಲೀಸರು ಹರಸಾಹಸ ಪಡಬೇಕಾಯಿತು.