Home ಜಿಲ್ಲೆ ಬೆಂಗಳೂರು ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಸಮಾರಂಭ

ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಸಮಾರಂಭ

ಬೆಂಗಳೂರು, ಜೂ. ೨೬- ನಗರದ ಚಂದ್ರಾ ಲೇ ಔಟ್, ವಿಜಯನಗರದಲ್ಲಿರುವ ಸೆಂಟ್ ಫ್ಲವರ್ಸ್ ಇಂಗ್ಲೀಷ್ ಸ್ಕೂಲ್ ನ ಪ್ರಾಂಶುಪಾಲರಾದ ಸೌಮ್ಯ. ಜಿ ಎಂಬುವರು ಉನ್ನತ ವ್ಯಾಸಂಗಕ್ಕಾಗಿ ಟ್ರಿನಿಟಿ ವಿಶ್ವವಿದ್ಯಾಲಯ ಐರ್ಲ್ಯಾಂಡ್‌ಗೆ ಹೋಗುತ್ತಿದ್ದು ಇವರು ೯ ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು ಉತ್ತಮ ಪಲಿತಾಂಶ, ಶಿಕ್ಷಕಿಯರೊಡನೆ ಉತ್ತಮ ಒಡನಾಟ,ಪೋಷಕರೊಂದಿಗೆ ಉತ್ತಮ ಭಾಂದವ್ಯ, ವಿದ್ಯಾರ್ಥಿಗಳನ್ನೂ ಸಹ ಪ್ರೀತಿಯಿಂದ ನೋಡುತ್ತಿದ್ದರು.


ಇದನ್ನೆಲ್ಲ ಅರಿತ ಸಂಸ್ಥಾಪಕರಾದ ಡಾ ಜಿ ಆರ್ ಕೃಷ್ಣಪ್ಪ ರವರು ಮುಂದಿನ ೩ ವರ್ಷದಲ್ಲಿ ಸೆಂಟ್ ಫ್ಲವರ್ ಸಂಸ್ಥೆಯನ್ನು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕೆಂಬ ಅಭಿಲಾಷೆಯಿಂದ ಸೌಮ್ಯ ಜಿ ರವರನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳಿಸುತ್ತಿದ್ದಾರೆ. ಇದನ್ನರಿತ ಈ ಸಂಸ್ಥೆಯ ಎಲ್ಲಾ ಶಿಕ್ಷಕರು ಶಾಲಾ ಸಂಸ್ಥಾಪಕರಿಗೆ ಅಭಿನಂದನೆ ತಿಳಿಸಿದ್ದಾರೆ.


ವ್ಯವಸ್ಥಾಪಕರಾದ ದರ್ಶನ್ ಕೃಷ್ಣ ರವರು ಮಾತನಾಡಿ ಸೌಮ್ಯ ಜಿ ರವರು ಮಕ್ಕಳ ಶ್ರೇಯೋಭಿರುದ್ಧಿಗೆ ಅಹರ್ನಿಶಿ ದುಡಿದು ಅತ್ಯತ್ತಮ ಶಿಕ್ಷಕಿ ಎಂದೇ ಕರೆಸಿಕೊಂಡರು.ಇವರ ಅತ್ಯುತ್ತಮ ಭೋದನೆಯಿಂದ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶದ ವಿವಿಧ ಭಾಗಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಇದ್ದಾರೆ ಎಂದು ಶ್ಲಾಘಿಸಿದರು.


ಸೌಮ್ಯ. ಜಿ ಮಾತನಾಡಿ ಈ ಸಂಸ್ಥೆ ನನಗೆ ಉತ್ತಮ ಜೀವನ ನಡೆಸುವ ಮಾರ್ಗವನ್ನು ತೋರಿಸಿ ಇದರ ಜೊತೆಗೆ ಉತ್ತಮ ವ್ಯಾಸಂಗಕ್ಕೂ ಸಹಕಾರಿಯಾಗುತ್ತಿದೆ.ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳೂ ಸಹ ಉತ್ತಮ ವಿದ್ಯಾಭ್ಯಾಸವನ್ನು ಪಡೆಯಬೇಕು.ಈ ಸಂಸ್ಥೆಗೆ ನಾನು ಎಂದೂ ಚಿರರುಣಿ ಎಂದರು.ಇವರ ಸ್ಥಾನ ತುಂಬಲು ಸುಮಾರು ೧೧ ವರ್ಷಗಳಿಂದಲೂ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಬಿನ್ಸಿ ಕೆ ಜೋಸ್ ರವರನ್ನು ಸೆಂಟ್ ಫ್ಲವರ್ಸ್ ಶಾಲೆಗೆ ಪ್ರಾಂಶಪಾಲರಾಗಿ ಸೇವೆ ಸಲ್ಲಿಸಲು ಸಂಸ್ಥಾಪಕರು ಸೂಚಿಸುತ್ತಾರೆ.ಇವರೂ ಸಹ ಶಿಕ್ಷಕಿಯರೊಡನೆ ಉತ್ತಮ ಒಡನಾಟವೊಂದಿದ್ದು ಪೋಷಕರನ್ನು,ಮಕ್ಕಳನ್ನು ಪ್ರೀತಿಯಿಂದ ಹೊಂದಿಕ್ಕೊಳ್ಳುತಾ ಇನ್ನೂ ಹೆಚ್ಚಿನ ಪಲಿತಾಂಶ ಬರಲು ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಲು ಶ್ರಮಿಸುತ್ತೇನೆ ಎಂದರು.