Home ಜಿಲ್ಲೆ ಕಲಬುರಗಿ ಅಡುಗೆ ವೇಳೆ ಎಚ್ಚರ ವಹಿಸಿ : ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಬಿಟ್ಟು ಹೋಗಿ : ಸಚಿವ...

ಅಡುಗೆ ವೇಳೆ ಎಚ್ಚರ ವಹಿಸಿ : ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಬಿಟ್ಟು ಹೋಗಿ : ಸಚಿವ ಡಾ.ಶರಣಪ್ರಕಾಶ ಪಾಟೀಲ

ಸೇಡಂ.ಅ.11: ತಾಲೂಕಿನ ಮುಧೋಳ ಇಂದಿರಾಗಾಂಧಿ ವಸತಿ ಶಾಲೆ ಮಕ್ಕಳಿಗೆ ಆಹಾರದಲ್ಲಾದ ಆತಂಕ ಹಾಗೂ ಆರೋಗ್ಯ ಸಮಸ್ಯೆ ಆಲಿಸಲು ಸೋಮವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.ಇಂದಿರಾಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಕುರಿತು ವೈದ್ಯರಿಂದ ಮಾಹಿತಿ ಪಡೆದು ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಕ್ಕಳೊಂದಿಗೆ ನೇರವಾಗಿ ಸಂವಾದ ನಡೆಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಆಹಾರದ ಗುಣಮಟ್ಟದ ಕುರಿತು ಪ್ರತ್ಯೇಕ ಅಭಿಪ್ರಾಯ ಕೇಳಿದರು. ದಿನನಿತ್ಯ ನೀಡುವ ಉಪಹಾರ, ಊಟದ ಕುರಿತು ಮಕ್ಕಳಲ್ಲಿರುವ ಆತಂಕವನ್ನು ಮುಕ್ತವಾಗಿ ಆಲಿಸಿ, ಮಕ್ಕಳಲ್ಲಿ ಧೈರ್ಯದ ಮಾತುಗಳನ್ನು ಸಚಿವರು ಆಡಿದರು.
ಅಡುಗೆ ಸಿಬ್ಬಂದಿಗಳ ಕೊರತೆ ಬಗ್ಗೆ ವಿಚಾರಿಸಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ಕರೆ ಮಾಡಿ ಸಿಬ್ಬಂದಿಗಳ ಕೊರತೆ ಕುರಿತು ಯಾಕೆ ನಿಯೋಜನೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಅಡುಗೆ ಸಿಬ್ಬಂದಿಗಳು ಪ್ರಾಂಶುಪಾಲರ ಸೂಚನೆ ಪಾಲಿಸದೆ ಮನಸೋ ಇಚ್ಛೆ ಅಡುಗೆ ಮಾಡಿದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ತಹಶಿಲ್ದಾರ ಶ್ರೇಯಾಂಕ ಧನಶ್ರೀ, ತಾಲೂಕು ಆರೋಗ್ಯ ಅಧಿಕಾರ ಸಂಜೀವ್ ಕುಮಾರ್ ಪಾಟೀಲ, ಬಸರಾಜ ಪಾಟೀಲ ಊಡಗಿ, ಶಿವಶರಣರೆಡ್ಡಿ ಪಾಟೀಲ, ರವೀಂದ್ರ ನಂದಿಗಾಮ್, ಶ್ರೀನಿವಾಸರೆಡ್ಡಿ ಚಂದಾಪುರ, ವೆಂಕಟರಾಮರೆಡ್ಡಿ ಕಡತಾಲ ಸೇರಿದಂತೆ ಅನೇಕ ಮುಖಂಡರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

============
ವಿದ್ಯಾರ್ಥಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ವಸತಿ ಶಾಲೆಯ ಮಕ್ಕಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಮಕ್ಕಳಲ್ಲಿದ್ದ ಆತಂಕ ತಿಳಿದುಕೊಳ್ಳಲು ತರಗತಿವಾರು ಪ್ರತ್ಯೇಕವಾಗಿ ಕರೆದು ಮುಕ್ತವಾಗಿ ಮಾತುಕತೆ ನಡೆಸಿದರು. ಶಾಲೆ, ವಸತಿ ನಿಯಲದ ಬಗ್ಗೆ ಸ್ಥಿತಿಗತಿ ಆಲಿಸಿದ ಅವರು ಮಕ್ಕಳೊಂದಿಗೆ ತಿಳಿಸಿದ ವಿಷಯವನ್ನು ನೋಟ್ ಮಾಡಿಕೊಂಡರು.