
ಬಾಗಲಕೋಟ,ಜು೧೦: ವಿಶ್ವವಿದ್ಯಾಲಯ ಜಮಖಂಡಿ ೩ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿದ್ದು, ಎಸ್.ಡಿ.ಎಮ್. ಟ್ರಸ್ಟ್ ಎಸ್.ಡಿ.ಎಮ್. ಶಿಕ್ಷಣ ಮಹಾವಿದ್ಯಾಲಯ ಶೇ.೧೦೦ ರ ಫಲಿತಾಂಶ ದಾಖಲಿಸಿದೆ.
ಎಸ್.ಡಿ.ಎಮ್. ಟ್ರಸ್ಟ÷್ದ ಎಸ್.ಡಿ.ಎಮ್. ಶಿಕ್ಷಣ ಮಹಾವಿದ್ಯಾಲಯದ ೩ನೇ ಸೆಮಿಸ್ಟರ್‌ನ ಪ್ರಶಿಕ್ಷಣಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದು ಒಟ್ಟು ೧೦೦ ಪ್ರಶಿಕ್ಷಣಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ೯೭ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ಲ್ಲಿ ಮತ್ತು ೦೩ ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ ಅದರಲ್ಲಿ ಮೊದಲನೆ ರ‍್ಯಾಂಕ: ತೇಜಸ್ವಿನಿ ಹಟ್ಟೆನ್ನವರ, ಎರಡನೇ ರ‍್ಯಾಂಕ: ಸಮೀನಾ ಮುಜಾವರ, ಮೂರನೆ ರ‍್ಯಾಂಕ: ತನವಿ ಪಾಟೀಲ. ಈ ಎಲ್ಲ ವಿದ್ಯಾರ್ಥಿಗಳಿಗೆ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ಚೇರ್‌ಮನ್ನ ಡಾ.ಮಹಾವೀರ ದಾನಿಗೊಂಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಪುಷ್ಪದಂತ ಎಮ್ ದಾನಿಗೊಂಡ ಮತ್ತು ಕಾಲೇಜಿನ ಪ್ರಾಚಾರ್ಯ ಡಾ. ಎಮ್ ಆರ್ ಪಾಟೀಲ ಹಾಗೂ ಶಿಕ್ಷಕ ವೃಂದದವರು ಶುಭಕೋರಿದ್ದಾರೆ.































