Home ಜಿಲ್ಲೆ ಕನ್ನಡ ಸಂಸ್ಕøತಿ ಉಳಿವಿಗೆ ಎಲ್ಲರ ಸಹಕಾರ ಅಗತ್ಯ: ಸಿದ್ರಾಮ ಶಿಂದೆ

ಕನ್ನಡ ಸಂಸ್ಕøತಿ ಉಳಿವಿಗೆ ಎಲ್ಲರ ಸಹಕಾರ ಅಗತ್ಯ: ಸಿದ್ರಾಮ ಶಿಂದೆ

ಬೀದರ: ಮೇ.29:ಡಾ.ಬಿ.ಆರ್.ಅಂಬೇಡ್ಕರ್ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ ಮಳಚಾಪೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಂಗೀತ ಮಹೋತ್ಸವ ಕಾರ್ಯಕ್ರಮವು ಮೇ 27, 2026ರಂದು ಸಂಜೆ 4 ಗಂಟೆಗೆ ನಗರದ ಡಾ. ಚೆನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂದೆ ಉದ್ಘಾಟಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ ಬೀದರ ಜಿಲ್ಲೆಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ. ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ವಿವಿಧ ಸಂಘ ಸಂಸ್ಥೆಗಳಿಗೆ ಧನಸಹಾಯ ನೀಡುತ್ತಿದ್ದು, ಜಿಲ್ಲೆಯಲ್ಲಿ ಸಂಸ್ಕೃತಿಯನ್ನು ಗಟ್ಟಿಯಾಗಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಮೇಶ ದೊಡ್ಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೊನಾರೆ ಮಾತನಾಡಿ, ಕಲಾವಿದರು ಸ್ವಾಭಿಮಾನಿಗಳಾಗಬೇಕು. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಗೌರವ ನೀಡಿದರೆ ಉತ್ತಮ ಬದುಕು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಬೌದ್ಧ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಎಸ್.ಎಂ. ಜನವಾಡಕರ್ ಮಾತನಾಡಿ, ಮಾನವ ಹುಟ್ಟಿದ್ದಾಗಲೇ ಜಾನಪದವು ಜನ್ಮ ತಾಳಿದೆ. ಜಾನಪದವನ್ನು ಉಳಿಸಿ ಬೆಳೆಸುತ್ತಿರುವವರು ಗ್ರಾಮೀಣ ಭಾಗದ ಜನರು ಎಂದು ಹೇಳಿದರು. ಇದೇ ವೇಳೆ ಗೀಗೀ ಪದ, ಕುಟ್ಟುವ ಹಾಡು ಹಾಗೂ ಬಿಸುವ ಹಾಡುಗಳನ್ನು ಹಾಡಿ ಎಲ್ಲರ ಮನರಂಜಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಮನೋಹರ್, ಹಿರಿಯ ಸಾಹಿತಿ ರಾಮಚಂದ್ರ ಗಣಾಪೂರ, ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್, ಸರ್ಕಾರಿ ಪ್ರೌಢ ಶಾಲೆ ಮಳಚಾಪೂರ ಮುಖ್ಯಗುರು ಚಿತ್ರಕಲಾ ರಾಮಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಎಸ್.ಬಿ. ಕುಚಬಾಳ್ ಹಾಗೂ ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಶೆಶಿಕಾಂತ ಶೆಂಬೆಳಿ, ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರ ಚಿತ್ರಶೇನ್ ಫುಲೆ ಹಾಗೂ ಕೆ.ಪಿ. ನ್ಯೂಸ್ ವರದಿಗಾರ ಪಪ್ಪುರಾಜ ಮೇತ್ರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು 12 ಸಾಂಸ್ಕೃತಿಕ ತಂಡಗಳು ಭಾಗವಹಿಸಿದ್ದವು. ನಾಡಗೀತೆಗಳನ್ನು ರಾಜಕುಮಾರ ಕರುಣಾಕರ್, ಗಜಲ್ ಗಾಯನವನ್ನು ರಮೇಶ ಕೋಳಾರ, ವಚನ ಗಾಯನವನ್ನು ಸಂಜುಕುಮಾರ ಸ್ವಾಮಿ, ಶಾಸ್ತ್ರೀಯ ಸಂಗೀತವನ್ನು ಶಿವಾಜಿ ಸಗರ, ಕೋಲಾಟವನ್ನು ಕಾಶಿನಾಥ ಸಂಗಡಿಗರು, ಅಂಬೇಡ್ಕರ್ ಗೀತೆಗಳನ್ನು ಸಂತೋಷ ನಿಜಂಪೂರ ಸಂಗಡಿಗರು, ಕ್ರಾಂತಿ ಗೀತೆಗಳನ್ನು ಶೆಶರಾವ ಬೆಳಕುಣಿ ಸಂಗಡಿಗರು, ಜಾನಪದ ಗೀತೆಗಳನ್ನು ಮಲ್ಲಮ್ಮಾ ಜಾಂತಿ, ಭಜನೆ ಪದಗಳನ್ನು ಶಕುಂತಲಾ ಭವಾನಿ ಮಹಿಳಾ ಮಂಡಳಿ, ತತ್ವ ಪದಗಳನ್ನು ಅಕ್ಕಮಹಾದೇವಿ ಮಹಿಳಾ ಮಂಡಳಿ, ಸಂಪ್ರದಾಯ ಪದಗಳನ್ನು ನಾಗಮ್ಮಾ ಮರಖಲ ಸಂಗಡಿಗರು ಹಾಗೂ ಕುಟ್ಟುವ-ಬಿಸುವ ಪದಗಳನ್ನು ರೆಷ್ಮಾ ನಿಜಂಪೂರ ಸಂಗಡಿಗರು ನೇರವೆರಿಸಿದ್ದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭಾಶಯ ಕೋರಲಾಯಿತು ಎಂದು ಸಮಿತಿಯ ಅಧ್ಯಕ್ಷ ರಮೇಶ ದೊಡ್ಡಿ ಮಳಚಾಪೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.