
ಭಾಲ್ಕಿ: ಕೆಕೆಆರ್ಡಿಬಿ ಅಡಿಯಲ್ಲಿ ಭಾಲ್ಕಿ ತಾಲೂಕಿನ ೨೫ ಇಸಿಸಿಇ ಶಾಲೆಗಳಲ್ಲಿ ೨೦೨೫-೨೬ನೇ ಸಾಲಿಗೆ ಆಯ್ಕೆಯಾದ ಪೂರ್ವ ಪ್ರಾಥಮಿಕ (ಐಏಉ/Uಏಉ) ಅತಿಥಿ ಶಿಕ್ಷಕರು ಹಾಗೂ ಆಯಾಗಳು ಕಳೆದ ೧೦ ತಿಂಗಳಿನಿAದ ಸಂಭಾವನೆ ಸಿಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತಕ್ಷಣವೇ ಬಾಕಿ ವೇತನ ಬಿಡುಗಡೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಜೂನ್ ೨೦೨೫ರಿಂದ ಮಾರ್ಚ್ ೨೦೨೬ರವರೆಗೆ ಇಲಾಖೆಯ ನಿಯಮಾನುಸಾರ ಮಕ್ಕಳಿಗೆ ಬೋಧನೆ ನಡೆಸಿ, ಹಾಜರಾತಿ ಹಾಗೂ ಅಗತ್ಯ ದಾಖಲೆಗಳನ್ನು ಪ್ರತಿತಿಂಗಳು ಸಲ್ಲಿಸಿದ್ದರೂ, ಶಿಕ್ಷಕರಿಗೆ ರೂ.೧೨,೦೦೦ ಹಾಗೂ ಆಯಾಗಳಿಗೆ ರೂ.೬,೨೫೦ ಮಾಸಿಕ ಸಂಭಾವನೆ ಇದುವರೆಗೆ ಮಂಜೂರಾಗಿಲ್ಲ ಎಂದು ಅವರು ಅಳಲು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಗಮನಕ್ಕೂ ವಿಷಯ ತಂದಿದ್ದರೂ, ಇನ್ನೂ ವೇತನ ಬಿಡುಗಡೆ ಆಗದಿರುವುದು ಬೇಸರಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ಭವಿಷ್ಯ ರೂಪಿಸುವ ಸೇವೆಯಲ್ಲಿ ತೊಡಗಿರುವ ಶಿಕ್ಷಕರು ಮತ್ತು ಆಯಾಗಳ ಶ್ರಮಕ್ಕೆ ನ್ಯಾಯ ದೊರಕಬೇಕಿದ್ದು, ಕಳೆದ ೧೦ ತಿಂಗಳ ಬಾಕಿ ಸಂಭಾವನೆಯನ್ನು ತಕ್ಷಣ ಬಿಡುಗಡೆ ಮಾಡಿ ಕುಟುಂಬಗಳ ಸಂಕಷ್ಟ ನಿವಾರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರುಗಳಾದ ಸುವರ್ಣಾ, ಜ್ಯೋತಿ,ಮುತ್ತಮ್ಮಾ,ಉಜ್ವಲಾ,ಸಮೀನಾ, ಮಂಜುಳಾ,ಭಾಗ್ಯಶ್ರೀ,ಪೂಜಾ, ಸ್ವೇತಾ,ಮೇಘಾ,ಹೀನಾ, ದತ್ತಾತ್ರಿ ಕಾಟಕರ, ಗಣಪತಿ ಭಕ್ತಾ,ನಿರಂಜಪ್ಪ ಪಾತ್ರೆ, ಸತ್ಯಾವಾನ ಕಾಂಬಳೆ, ಚಂದ್ರಕಾAತ ತಳವಾಡೆ ಹಾಗೂ ಮುಖ್ಯ ಗುರುಗಳು,ಸಹ ಶಿಕ್ಷಕರು ಹಾಗೂ ಮತ್ತಿತರರು ಅನೇಕರು ಉಪಸ್ಥಿತರಿದ್ದರು.

























